ಬೆಂಗಳೂರು:(ಮೇ ೨೦)
ಮಧ್ಯಾಹ್ನ 1 ಗಂಟೆ ಸಮಯ. ಎಲ್ಲರೂ ತಮ್ಮ ಪಾಡಿಗೆ ತಾವು ಕುಳಿತಿದ್ದರು. ಮಾಧ್ಯಮಗಳಲ್ಲಿ ಕೊರೋನಾ ರೌದ್ರ ನರ್ತನ, ಹಾಗೂ ಅಂಪನ್​ ಚಂಡಮಾರುದ ಬಗ್ಗೆ ಸುದ್ದಿ ಬಿತ್ತರಿಸಲಾಗುತ್ತಿತ್ತು. ಇದೇ ವೇಳೆ ಈ ದೊಡ್ಡದಾದ ಶಬ್ದ ಕೇಳಿದ್ದು ಆತಂಕ ಮೂಡಿಸಿತ್ತು.
ಕೆಲವರು ವಿಮಾನ ಉರುಳಿತು ಎಂದು ಭಾವಿಸಿದರೆ, ಕೆಲವರು ಯಾವುದೋ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದೆ ಎಂದುಕೊಂಡಿದ್ದರು. ಇನ್ನೂ ಕೆಲವರು ಇದು ಭೂಕಂಪ ಆಗುತ್ತಿದೆ ಎಂದೇ ಭಾವಿಸಿದ್ದರು. ಇದಕ್ಕೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮಾನಿಟರಿಂಗ್ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಆಂಗ್ಲ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದು, ಇದು ಭೂಕಂಪನದಿಂದ ಆದ ಶಬ್ದವಲ್ಲ ಎಂದು ಹೇಳಿದ್ದಾರೆ
ಇಂದು ನಗರದಾದ್ಯಂತ ಫೈಟರ್​ ಜೆಟ್​ಗಳು ಹಾರಾಟ ನಡೆಸುತ್ತಿವೆ. ಈ ಫೈಟರ್​ ಜೆಟ್​ಗಳಿಂದ ಈ ರೀತಿ ಶಬ್ದ ಹೊರಬಂದಿದೆ ಎಂದು ಶ್ರೀನಿವಾಸ್​ ರೆಡ್ಡಿ ತಿಳಿಸಿದ್ದಾರೆ. ಆದರೆ, ಈ ಹೇಳಿಕೆಯನ್ನು ಎಚ್​ಎಎಲ್​ ತಿರಸ್ಕರಿಸಿದೆ. ಈ ಶಬ್ದಕ್ಕೂ ಫೈಟರ್​ ಜೆಟ್​ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಸದ್ಯ, ಈ ಬಗ್ಗೆ ಟ್ವಿಟ್ಟರ್​ನಲ್ಲಿ ಚರ್ಚೆ ಜೋರಾಗಿ ಸಾಗಿದೆ.
*************all images are taken by google ********************