ಬೆಂಗಳೂರು: ಪ್ರಶಾಂತ್ ನೀಲ್ ಈ ಹೆಸರು ಯಾರಿಗೆ ಗೊತ್ತಿಲ್ಲ ಈಗ, ಇಡೀ ಭಾರತ ಚಿತ್ರರಂಗವನ್ನು KGF ಮೂಲಕ ನಮ್ಮ ಸ್ಯಾಂಡಲ್ ವುಡ್ ಕಡೆಗೆ ತಿರುಗಿ ನೋಡುವಂತೆ ಮಾಡಿದ ಒಬ್ಬ ಅಧ್ಬುತ ನಿರ್ದೇಶಕ. ಈತನ ಮಾತು ಕಮ್ಮಿ ಆದರೂ ಕೆಲಸ ಮಾತ್ರ ಮುಗಿಲು ಮುಟ್ಟುವಂತದು. ಆದರೆ ಈತ ಈಗ ಕನ್ನಡವನ್ನು ಬಿಟ್ಟು ಬೇರೆ ಚಿತ್ರರಂಗಕ್ಕೆ (ತೆಲುಗು) ಹೋಗಿ ನಿರ್ದೇಶನ ಮಾಡುತ್ತಾನೆ ಎಂಬುದು ಬಹುತೇಕ ಖಚಿತವಾಗಿದೆ. ಆದರೆ ಇದು ಎಷ್ಟು ಸರಿ?????👇👇👇👇
ನೀಲ್ ಅವರು ಉಗ್ರಂ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯ ಆದವರು. ಈ ಚಿತ್ರವು ಗಳಿಸಿದ ಯಶಸ್ಸು ಎಲ್ಲರಿಗೂ ಗೊತ್ತೇ ಇದೆ. ಇದಾದ ಸುಮಾರು ವರ್ಷಗಳ ನಂತರ KGF ಮೂಲಕ ಮತ್ತೆ ಸೌಂಡ್ ಮಾಡಿದ್ದರು. ಈ ಚಿತ್ರದ ಅಬ್ಬರ ಹೇಗಿತ್ತು ಅಂದರೆ ಇದು ತೆರೆ ಕಂಡ ದಿನವೇ ಬಂದ ಹಿಂದಿ ಚಿತ್ರವಾದ ಝೀರೋ(Zero) ಮತ್ತು ತಮಿಳ್ ಚಿತ್ರವಾದ ಮಾರಿ 2(Maari 2) ಇದರ ಮುಂದೆ ಸೋತು ಸುಣ್ಣವಾಯಿತು. ಕನ್ನಡ, ಕನ್ನಡ ಚಿತ್ರರಂಗವನ್ನು ಕ್ಯಾರೇ ಅನ್ನದ ಬೇರೆ ಚಿತ್ರರಂಗದವರು ಇವಾಗ KGF ಅನ್ನು ಬಾಹುಬಲಿ ಗಿಂತ ದೊಡ್ಡ ಚಿತ್ರ ಎನ್ನುವ ಮಟ್ಟಿಗೆ ಇಡೀ ವಿಶ್ವದಾದ್ಯಂತ ಈ ಚಿತ್ರ ಅಬ್ಬರಿಸಿ ಬೊಬ್ಬೇರಿದಿತ್ತು.
ಮೊನ್ನೆ ಜೂ.ಎನ್ ಟಿ ಆರ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡುವ ಮೂಲಕ ನೀಲ್ ಅವರು ತೆಲುಗು ಚಿತ್ರರಂಗಕ್ಕೆ ಹೋಗುವುದನ್ನು ಖಚಿತ ಪಡಿಸಿದ್ದಾರೆ.👇👇👇
ಇದರಿಂದಾಗಿ ಹಲವಾರು ಕನ್ನಡ ಸಿನಿರಸಿಕರು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ನೀಲ್ ಅವರ ವಿರುದ್ಧವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನೆಗಟಿವ್ ಟ್ರೆಂಡ್ ಕೂಡ ಆಗಿತ್ತು.
- ಕನ್ನಡದಲ್ಲಿ ಕೇವಲ 2 ಚಿತ್ರವನ್ನು ಅಷ್ಟೆ ಮಾಡಿರುವ ನೀಲ್ ಅವರು ಇಷ್ಟು ಬೇಗ ಬೇರೆ ಚಿತ್ರರಂಗಕ್ಕೆ ಹೋಗುವುದು ಎಷ್ಟು ಸರಿ??
- ಪ್ರಶಾಂತ್ ನೀಲ್ ಅವರು ಯಶಸ್ಸು ಸಿಕ್ಕಿತೆಂದು ಬೇರೆ ದಿಕ್ಕಿಗೆ ತಿರುಗುವುದು ತಪ್ಪು.
- ನಿಮಗೂ ರಶ್ಮಿಕ ಮಂದಣ್ಣ ಅವರಿಗೂ ಯಾವುದೇ ವಯತ್ಯಾಸವಿಲ್ಲ.
- ಇಗಾಗಲೇ ಬೇರೆಯವರು ಕನ್ನಡ ಚಿತ್ರರಂಗವನ್ನು ಕಡೆಗಣಿಸುತ್ತಾ ಬಂದಿದ್ದಾರೆ. ನೀವು ನಮ್ಮಲ್ಲೇ ಇದ್ದುಕೊಂಡು ಕನ್ನಡವನ್ನು ಬೇರೆ ಚಿತ್ರರಂಗಕ್ಕಿಂತ ಮೇಲೆ ತೆಗೆದುಕೊಂಡು ಹೋಗಬೇಕು. ಅಲ್ಲಿರುವ ನಟರಿಗಿಂತ ನಮ್ಮ ಕನ್ನಡ ನಟರು ಕಮ್ಮಿ ಏನಲ್ಲ, ನಮ್ಮ ಕನ್ನಡ ನಟರ ಸಾಮರ್ಥ್ಯವನ್ನು ಕಡೆಗಣಿಸಬೇಡಿ, ಇನ್ನೂ ಮುಂತಾದವು ನಮ್ಮ ಕನ್ನಡಿಗರ ಅಕ್ರೋಷವಾಗಿದೆ.
"ಜನರದ್ದು ತಪ್ಪೇನಿದೆ ಹೇಳಿ ನಮ್ಮ ಕನ್ನಡದವರು ನಮ್ಮಲ್ಲೇ ಇದ್ದು ನಮ್ಮ ಕನ್ನಡವನ್ನು ಕನ್ನಡ ಚಿತ್ರರಂಗವನ್ನು ಇನ್ನು ಎತ್ತರಕ್ಕೆ ಕರೆದೊಯ್ದು, ಕನ್ನಡವನ್ನು ಉತುಂಗಕ್ಕೆ ಏರಿಸಿ, ಬೇರೆ ಭಾಷೆಯ ಚಿತ್ರಕ್ಕಿಂತ ನಮ್ಮ ಚಿತ್ರವೂ ಮಿಗಿಲಾಗಿರಬೇಕು ಎಂಬುದು ನಮ್ಮ ಆಶಯ ಅಷ್ಟೆ".🙏🙏🙏
***********all images are taken by google ****************