ಬೆಂಗಳೂರು: ಆರ್.ಸಿ. ಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) IPL ನಲ್ಲಿ ಸುಮಾರು ವರ್ಷಗಳಿಂದ ಆಡುತ್ತಿರುವ ಏಕೈಕ ಕರ್ನಾಟಕದ ತಂಡ. ಈ ತಂಡಕ್ಕೆ ವಿಶ್ವದಾದ್ಯಂತ ಅಪಾರ ಪ್ರಮಾಣದ ಅಭಿಮಾನಿ ಬಳಗವಿದೆ. ಆದರೆ ಈ ತಂಡವು ಸತತವಾಗಿ 12 ವರ್ಷಗಳಿಂದ IPL ಸರಣಿಯನ್ನು ಆಡುತ್ತಿದ್ದು, ಒಂದು ಬಾರಿಯೂ ಕಪ್ ಅನ್ನು ಗೆದ್ದೆಯಿಲ್ಲ. RCB ತಂಡವು ಪ್ರತಿ ವರ್ಷವೂ ಉತ್ತಮ ತಂಡವನ್ನು ಹೊಂದಿದ್ದರು, ಕಪ್ ಗೆಲ್ಲುದರಲ್ಲಿ ಎಲ್ಲೋ ಪ್ರತಿ ವರ್ಷವೂ ಎಡುವುತ್ತಾರೆ. ಇದಕ್ಕೆ ಕಾರಣವನ್ನು ಒಬ್ಬ ಆಕ್ರೋಶಿತ ನೊಂದ ಅಭಿಮಾನಿಯು ಈ ರೀತಿ ನೀಡಿರುತ್ತಾನೆ.👇👇👇👇👇

  • ಮೊದಲನೆಯದಾಗಿ RCB ತಂಡದ ಮ್ಯಾನೇಜ್ಮೆಂಟ್, ಇವರು ಯಾವಾಗಲೂ ಒಂದು ಸಂಪೂರ್ಣ ತಂಡವನ್ನು ಖರಿದಿಸುವಲ್ಲಿ, ರಚಿಸುವಲ್ಲಿ ಎಡುವುತ್ತಿರುತ್ತಾರೆ. ಇವರು ಪ್ರತಿ ವರ್ಷವೂ ಬ್ಯಾಟ್ಸ್ಮನ್ ಗಳ ಮೇಲೆ ಹೆಚ್ಚು ಒಲವನ್ನು ತೋರಿಸುತ್ತಾರೆ, ಉತ್ತಮ ಬೌಲರ್ಸ್ ಗಳು ಹಾಗೂ ಅಲ್ - ರೌಂಡರ್ ಗಳು ಇವರ ಕಣ್ಣಿಗೆ ಬೀಳೊದೆ ಇಲ್ವೇನೋ???. ಇನ್ನೂ ಇದು ಒಂದು ಕರ್ನಾಟಕದ ತಂಡವಾದರೂ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಆಟಗಾರರು ಆಡುವುದು ಕನಸೇ ಬಿಡಿ.😒😒

  • RCB ತಂಡದ ಕ್ಯಾಪ್ಟನ್ ಹಾಗೂ ಮ್ಯಾನೇಜ್ಮೆಂಟ್ ಅವರು ತಂಡದ ಆಟಗಾರರ ಮೇಲೆ ನಂಬಿಕೆ ಇಡದಿದ್ದದ್ದು. ಒಬ್ಬ ಆಟಗಾರನಿಂದ ಉತ್ತಮ ಆಟವು ಒರಗೆ ಬರಲು ಮೊದಲು ಆ ತಂಡವು ಸಂಪೂರ್ಣ ನಂಬಿಕೆ ಇಡಬೇಕು. ಆದರೆ ನಮ್ಮ RCB ಅವರು ಒಬ್ಬ ಆಟಗಾರನ ಸಾಮರ್ಥ್ಯ ವನ್ನು 1-2 ವರ್ಷದ ಸರಣಿಯಿಂದಲೇ ಅಳೆದು ಬಿಡುತ್ತಾರೆ. ಈ ರೀತಿ ಮಾಡಿ ಡಿ.ಕಾಕ್, ಶಿಮ್ರಾನ್, ಮೆಕಲಮ್, ವಾಟ್ಸನ್ ಇನ್ನೂ ಮುಂತಾದವರು 1-2 ಸರಣಿ ಆಡಿಸಿ ತಂಡದಿಂದ ಕೈ ಬಿಟ್ಟಿದ್ದರು. ನಮ್ಮ RCB ಮ್ಯಾನೇಜ್ಮೆಂಟ್ ಎಷ್ಟು ಬೇಜವಾಬ್ದಾರಿ ಎಂದು ಗೇಲ್ ಮತ್ತು ಕೆ.ಎಲ್.ರಾಹುಲ್ ಅಂತಹ ಆಟಗಾರರನ್ನು ಬಿಟ್ಟಾಗಲೆ ನಿಮಗೆ ಗೊತ್ತಾಗಿರುತ್ತದೆ.

  • IPL ನಲ್ಲಿ ಬೇರೆ ಎಲ್ಲ ತಂಡವು ಅಬ್ಬಬ್ಬಾ ಎಂದರೆ ಒಂದು 2-3 ಮ್ಯಾಚ್ ಗಳಲ್ಲಿ ಬೆಸ್ಟ್ 11 ರೆಡಿ ಆಗಿರುತ್ತದೆ. ಆದರೆ ನಮ್ಮ ತಂಡದಲ್ಲಿ ಹಾಗಿಲ್ಲ, ತಂಡದ ಕ್ಯಾಪ್ಟನ್ ವಿರಾಟ್ ಅವರು ಪ್ರತಿ ವರ್ಷವೂ ಬೇಗನೇ ಉತ್ತಮ 11 ಜನರ ತಂಡವನ್ನು ಕಟ್ಟುವಲ್ಲಿ ಎಡುವುತ್ತಿರುತ್ತಾರೆ. 

  • ಇನ್ನೂ ಅಭಿಮಾನಿಗಳು, ಒಂದು ತಂಡದಿಂದ ಮ್ಯಾಚ್ ಗೆಲ್ಲುವ ಉತ್ತಮ ಪ್ರದರ್ಶನ ಬರಬೇಕಾದರೆ, ತಂಡದ 11 ಜನರು ಅತ್ಯಗತ್ಯ. ಎಷ್ಟೋ ಜನರು RCB ಅಂದರೆ ಬರೀ ಕೊಹ್ಲಿ, ಎ.ಬಿ.ಡಿ ಅಷ್ಟೆ ಅನ್ನುತ್ತಾ ಇರುತ್ತಾರೆ ಇದು ತಪ್ಪು. RCB ಗೆ ಆಡುವ ಎಲ್ಲರೂ ಗೆಲುವಿಗಾಗಿಯೇ ಶ್ರಮಿಸುತ್ತಾರೆ, ಎಲ್ಲರೂ ಪ್ರಶಂಶೆಗೆ ಅರ್ಹರು♥️👍.

        ಕಪ್ ಗೆಲ್ಲದಿದ್ದರು ನಮ್ಮ RCB ತಂಡದ ಮನರಂಜಿತ ಆಟವು ಮಿಕ್ಕೆಲ್ಲ ತಂಡಕ್ಕಿಂತ ಮಿಗಿಲಾದದ್ದು. ಆದರೆ ಎಷ್ಟೇ ಮನರಂಜನೆ ನೀಡಿದರು ಒಂದು ತಂಡಕ್ಕೆ ಸಾರ್ಥಕತೆ ಸಿಕುವುದು ಆ ತಂಡವು ಒಂದು ಬಾರಿ ಆದ್ರು ಕಪ್ ಗೆದ್ದಾಗ ಮಾತ್ರ. ಈ ಮುಂಬರುವ IPL ಅನ್ನು  ಆದರೂ RCB ಗೆಲ್ಲಲಿ ಎಂಬುವುದು ಎಲ್ಲಾ ಅಭಿಮಾನಿಗಳ ಆಶಯ.

******************all images are taken by google****************************