ಹೌದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಡಿಯಲ್ಲಿ  ಓದುವ ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲದಂತಾಗಿದೆ,
                                                                  ಕ್ರೆಡಿಟ್:google
ಈ ಹಿಂದೆ ಪ್ರಶ್ನೆಪತ್ರಿಕೆ ಸೋರಿಕೆ,ಮರುಮೌಲ್ಯಮಾಪನದ ಹಗರಣದಲ್ಲಿ ಸುದ್ದಿಯಾಗಿದ್ದ VTU, ಈಗ ದೇಶವೇ ಚೀನಾ ವೈರಾಣು ಮಹಾಮಾರಿಯ ನಡುವೆಯೂ ಪರೀಕ್ಷೆ ನಡೆಸಲು ಮುಂದಾಗಿದೆ. 
       ದೇಶದಲ್ಲಿ ಲಾಕ್ ಡೌನ್ ಸಡಿಲಿಕೆಯ ನಂತರ ಮಹಾಮಾರಿ ದಿನೇದಿನೇ ಖಾಯಿಲೆಯ  ದಾಖಲೆ ಸೃಷ್ಟಿಸುತ್ತಿದ ಜೂನ್5ರಂದು ಒಂದೇದಿನ ಕರ್ನಾಟಕದಲ್ಲಿ 515 ಹೊಸಪ್ರಕರಣ ಪತ್ತೆಯಾಗಿ 4835ಕ್ಕೆ ಏರಿಕೆಯಾಗಿದೆ ಮತ್ತು ದೇಶವ್ಯಾಪಿ ಒಂದೇ ದಿನ 9851 ಜನರಿಗೆ ಸೂಂಕು ತಗುಲಿದ್ದು ಪ್ರಪಂಚದಾದ್ಯಂತ ಒಂದೇದಿನ ಅತಿಹೆಚ್ಚು ಸೂಂಕು ತಗುಲಿರುವ ಪಟ್ಟಿಯಲ್ಲಿ ಭಾರತ 3ನೇ ಸ್ಥಾನಕ್ಕೆ ಬಂದು ನಿಂತಿದೆ. ಮತ್ತು ದೇಶದಾದ್ಯಂತ ಒಟ್ಟು 2,26,770ಕ್ಕೆ ಏರಿಕೆಯಾಗಿ 6,348 ಜನ ಮೃತಪಟ್ಟಿದ್ದಾರೆ. 
         ಈ ಸಾವು ನೋವಿನ ನಡುವೆಯೂ ಮಕ್ಕಳಿಗೆ ಆನ್ಲೈನ್ ನಲ್ಲಿ ತರಗತಿ ನಡೆಸಿ ಅಕ್ಟೋಬರ್ ನಲ್ಲಿ ಮತ್ತೆ ಒಂದೇ ತಿಂಗಳಿನಲ್ಲಿ ಕಾಲೇಜಿನಲ್ಲಿ ಪಾಠ ಭೋದನಯ ನಂತರ ಪರೀಕ್ಷೆ ನಡೆಸುತ್ತೇವೆಂದು ಹೇಳಿಕೊಂಡಿದೆ, ಈ ಸೂಂಕು ಹರಡುತ್ತಿರುವ ವೇಗದಲ್ಲಿ ಕಾಲೇಜಿನಲ್ಲಿ ಮಕ್ಕಳು ಕೊಠಡಿಯಲ್ಲಿ  ಸೇರುವಾಗ ಒಬ್ಬರಿಗಾದರೂ ಸೂಂಕು ತಗುಲಿದರೆ? ಅವರ ಜೀವಕ್ಕೆ ಆಪತ್ತು ಬಂದರೆ? ಆ ಜೀವಗಳನ್ನು  ಮತ್ತೆ ತಾಂತ್ರಿಕ ವಿದ್ಯಾಲಯ ಮಂತ್ರ ಮಾಡಿ ವಾಪಸ್ ಕೊಡಲು ಸಾದ್ಯವ? ಇಂತಹ ಪರಿಸ್ಥಿತಿಯಲ್ಲೂ ಮಕ್ಕಳಿಗೆ ಪರೀಕ್ಷೆ ಅವಶ್ಯಕತೆ ಇದೆಯಾ? ಅತೀ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳು ಇರುವುದು ಬೆಂಗಳೂರಿನಲ್ಲೇ ಮತ್ತು ದೇಶದಾದ್ಯಂತ ಬೇರೆ ಬೇರೆ ಜಿಲ್ಲವಾರು ರಾಜ್ಯಗಳಿಂದ ವಿದ್ಯಾರ್ಥಿಗಳು ಬಂದು ಹಾಸ್ಟೆಲ್ ನಲ್ಲಿ  ವ್ಯಾಸಂಗ ಮಾಡುತ್ತಿದ್ದಾರೆ,
ಪರೀಕ್ಷೆಗಾಗಿ ದೂರದ ಊರಿನಿಂದ ಬರುವ ಮಕ್ಕಳಿಗೆ ಕಾಯಿಲೆ ಹರಡುವುದಿಲ್ಲವಾ? IIT ಅಂತಹ ವಿಶ್ವ ವಿದ್ಯಾಲಯಗಳೆ ಪರೀಕ್ಷೆ ರದ್ದುಗೊಳಿಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಿರುವಾಗ ಇವರದೆಂತಹ ತೀರ್ಮಾನ? ಬರೀ ಪರೀಕ್ಷೆ ನಡೆಸುವುದೇ ಇವರ ಉದ್ದೇಶವಾಗಿದೆಯೇ? ಮಕ್ಕಳ ಜೀವಕ್ಕಿಂತ ಇವರಿಗೆ ಪರೀಕ್ಷೆಯೊಂದೇ ಬಹುಮುಖ್ಯವಾಗಲು VTU ಕಾರಣವಾದರೂ ಏನು? ಇಂತಹ ಪ್ರಶ್ನೆಗಳನ್ನು ಮುಂದಿಟ್ಟು  #savekarnatakastudents ವಿದ್ಯಾಥಿಗಳು  ಟ್ವಿಟ್ಟರ್ ನಲ್ಲಿ ಪ್ರತಿಭಟನೆ  ಮಾಡುತ್ತಿದ್ದಾರೆ.
 
ಕ್ರೆಡಿಟ್:twitter 

     ವಿದ್ಯಾರ್ಥಿಗಳಿಗಿರುವ ಸಾಮಾನ್ಯ ಪ್ರಜ್ಞೆ ನಮ್ಮ ಸರಕಾರಕ್ಕೆ ಇಲ್ಲವಾಯಿತೆ? ಕರೋನಾ ಹರಡುವ  ಬೇತಿಯಿಂದ ಆನ್ಲೈನ್ ಅಲ್ಲೇ ಪ್ರತಿಭಟನೆ ನಡೆಸುತ್ತಿರುವುದು ಇಲ್ಲಿ ಗಮನಾರ್ಹ.
ನೀವು ನಿಮ್ಮ ಅನಿಸಿಕೆಯನ್ನು ಬರೆದು ಕಳುಹಿಸಲು ಪಕ್ಕದಲ್ಲಿರುವ  ನಮ್ಮ space news whatsapp ಗೆ ಕಳುಹಿಸಿ

***ಇಂತಹ ಕುತೂಹಲಕಾರಿಯಾದ ಮಾಹಿತಿಯನ್ನು ಪಡೆಯಲು ನಮ್ಮ instagram & facebook ಗೆ ಫೋಲ್ಲೋ ಮಾಡಿ***