ಎಲ್ಲಾ ಮೊಬೈಲ್ ಬಳಕೆದಾರರಿಗೂ ಒಂದು ಸಮಸ್ಯೆ ಮೊಬೈಲ್ ನ ಬ್ಯಾಟರಿ ಪರ್ಸೆಂಟೇಜ್ 10 ಕ್ಕೆ ಇಳಿಯುತ್ತಿದ್ದಂತೆ ಮುಖ ಸಣ್ಣಗಾಗಿ ಹೋಗುತ್ತದೆ, ಮೊಬೈಲ್ ತಯಾರಕ ಕಂಪನಿಗಳು 4000-5000 mah ನಂತಹ ದೊಡ್ಡ ದೊಡ್ಡ ಬ್ಯಾಟರಿಗಳನ್ನು ಮೊಬೈಲ್ ನಲ್ಲಿ ಅಳವಡಿಸಿದ್ದರು ನಿಮ್ಮ ಬ್ಯಾಟರಿ ನಿಲ್ಲುತ್ತಿಲ್ಲದಿರುವ ಕಾರಣಗಳೊಂದಿಗೆ ನಮ್ಮ ಸಲಹೆ.
1. ನೀವು ಚಾರ್ಜ್ ಹಾಕಿ 4G ಡಾಟಾ ಜೊತೆಗೆ PUBG ಅಂತಹ ಅಪ್ಲಿಕೇಷನ್ ಬಳಕೆ ಮಾಡುತ್ತಿರುವುದು. (ಏರೋಪ್ಲೆನ್ ಮೋಡ್ ಆನ್ ಮಾಡಿ ಅಥವಾ ಸ್ವಿಚ್ ಆಫ್ ಮಾಡಿ ಚಾರ್ಜ್ ಹಾಕುವುದು ಒಳ್ಳೆಯದು ಇಲ್ಲದಿದ್ದಲ್ಲಿ ಮೊಬೈಲ್ ಬಿಸಿಯಾಗಿ ಬ್ಯಾಟರಿ ಹಾಳಾಗುವ ಸಾದ್ಯತೆ ಹೆಚ್ಚಿರುತ್ತದೆ)
2.ಡಾಟಾ, ಬ್ಲೂಟೂತ್, ಜಿ.ಪಿ.ಎಸ್ ಮತ್ತು Sync ಆಪ್ಶನ್ ಗಳನ್ನು ಬಳಕೆಯಿಲ್ಲದ ಸಂದರ್ಭದಲ್ಲೂ ಆನ್ ಮಾಡಿ ಇಟ್ಟಿಕೊಂಡಿರುವುದು.(ನಿದ್ರಿಸುವಾಗ ಅಥವಾ ಬಳಕೆಯಿಲ್ಲದಿರುವಾಗ ಈ ಎಲ್ಲವನ್ನೂ ಆಫ್ ಮಾಡಿ ಇಲ್ಲವಾದರೆ ಸುಮ್ಮನೆ ಬ್ಯಾಟರಿ ಎಳೆಯುತ್ತಿರುತ್ತವೆ ಅದರಲ್ಲೂ ಜಿಪಿಎಸ್ )
3.ಬಳಕೆಯಿಲ್ಲದ ಅಪ್ಲಿಕೇಷನ್ ಗಳನ್ನು ಸುಮ್ಮನೆ ಇಟ್ಟುಕೊಂಡಿರುವುದು. ( ತಿಂಗಳಿಗೊಮ್ಮೆ
ಬಳಸುವ ಅಥವಾ ಬಳಕೆಯಿಲ್ಲದ ಅಪ್ಲಿಕೇಷನ್ ಅನ್ನು ಸುಮ್ಮನೆ ಇಟ್ಟುಕೊಂಡರೆ ಅದು ನೀವು ಡಾಟಾ ಆನ್ ಮಾಡಿದಾಗಲೆಲ್ಲಾ ನಿಮ್ಮ ಡಾಟಾ ದೊಂದಿಗೆ ಬ್ಯಾಟರಿಯನ್ನು ಎಳೆಯುತ್ತದೆ ಉದಾಹರಣೆಗೆ Shareit, ucbrowser ಇಂತಹ ಆಪ್ ಡಿಲೀಟ್ ಮಾಡಿ )
4.ಯಾವುದೋ ಮೊಬೈಲ್ ಚಾರ್ಜರ್ ಅನ್ನು ಯಾವುದೋ ಮೊಬೈಲ್ ಗೆ ಹಾಕಿ ಚಾರ್ಜ್ ಮಾಡುವುದು.
(ಇದು ತಪ್ಪು ನಿಮ್ಮ ಮೊಬೈಲ್ ಚಾರ್ಜರ್ 5 volt 1 amp ಇದ್ದರೆ ಅಂತಹದೇ output ಬರುವ ಚಾರ್ಜರ್ ಬಳಸಿ ಇಲ್ಲವಾದಲ್ಲಿ ಬ್ಯಾಟರಿ ಬಿಸಿಯಾಗಿ ಒಳಗಿನ ಸರ್ಕ್ಯೂಟ್ ಹಾಳಾಗುವ ಸಾದ್ಯತೆ ಹೆಚ್ಚಿರುತ್ತದೆ)
5.ಆಗತ್ಯವಿಲ್ಲದ ಸಂದರ್ಭದಲ್ಲೂ ಪವರ್ ಬ್ಯಾಂಕ್ ಬಳಕೆ ಮಾಡುವುದು. ತುಂಬಾ ಮುಖ್ಯವಾದ ವಿಷಯ
(ನೀವು ಅಂದುಕೊಂಡಷ್ಟು ಅನಾವಶ್ಯಕವಾಗಿ ಪವರ್ ಬ್ಯಾಂಕ್ ಬಳಸಿ ಚಾರ್ಜ್ ಮಾಡುವುದು ಒಳ್ಳೆಯದಲ್ಲ ಪವರ್ ಬ್ಯಾಂಕ್ ಇಂದ ಬರುವ ವೋಲ್ಟೇಜ್ ಮತ್ತು ಕರೆಂಟ್ ಸಾಮಾನವಾಗಿ ಬರುವುದಿಲ್ಲ ಇದು ನಿಮ್ಮ ಅನುಭವಕ್ಕೆ ಬಂದಿರಬಹುದು ಪವರ್ ಬ್ಯಾಂಕ್ ಇಂದ ಚಾರ್ಜ್ ಮಾಡಿದಾಗ ಮತ್ತು ಚಾರ್ಜರ್ ಇಂದ ಚಾರ್ಜ್ ಮಾಡಿದಾಗ ಬರುವ ಬ್ಯಾಟರಿ ಬಾಕಪ್ ಗೆ ಬಹಳ ವ್ಯತ್ಯಾಸ ವಿರುತ್ತದೆ ) ಬೀದಿ ಬದಿಯ ಪವರ್ ಬ್ಯಾಂಕ್ ಖರೀದಿ ಮಾಡಲೇ ಬೇಡಿ.
ಪವರ್ ಬ್ಯಾಂಕ್ ತುಂಬಾ ಅವಶ್ಯಕವಾದಲ್ಲಿ ಒಳ್ಳೆ ಕಂಪನಿಯ ಪವರ್ ಬ್ಯಾಂಕ್ ಬಳಸಿ 500-1000ಕ್ಕೆ ಯೋಚನೆ ಮಾಡಲು ಹೋಗಿ ಐದರಿಂದ ಹತ್ತುಸಾವಿರದ ಮೊಬೈಲ್ ಅನ್ನು ಹಾಳು ಮಾಡಿಕೊಳ್ಳಬೇಡಿ.
ಕೆಲವು ಒಳ್ಳೆಯ ಪವರ್ ಬ್ಯಾಂಕ್ ನ ಲಿಸ್ಟ್
Realme 10000mAH Power Bank 1299/-
6.ಮೊಬೈಲ್ ನಲ್ಲಿ ಬ್ಯಾಕ್ ಗ್ರೌಂಡ್ ನ ಅಪ್ಲಿಕೇಷನ್ ಸುಮ್ಮನೆ ಬಳಕೆಯಲ್ಲಿರುವುದು.
(ನೀವು ಗಮನಿಸಿರಬಹುದು ಯಾವುದೇ ಅಪ್ಲಿಕೇಷನ್ ಇಂಸ್ಟಾಲ್ ಮಾಡುವಾಗ ಸುರಾಸುಮ್ಮನೆ ನೀವು ಎಲ್ಲದಕ್ಕೂ ಪರ್ಮಿಷನ್ ಗೆ ನೀವು ಎಸ್ ಅಥವಾ ಓಕೆ ಎಂದು ಕೊಟ್ಟುಬಿಡುತ್ತೀರಾ? ಇದು ತಪ್ಪು ಉದಾಹರಣೆಗೆ shareit ಅಪ್ಲಿಕೇಷನ್ ಗೆ ಬೇಕಾಗಿರುವ ಪರ್ಮಿಷನ್ ವೈಫೈ ಸ್ಟೋರೇಜ್ ಮತ್ತು ಬ್ಲೂಟೂತ್ ಬೇಡದಿರುವ ಕಾಲ್ ಎಸ್ಎಮ್ಎಸ್ ಪರ್ಮಿಷನ್ ಏಕೆ
ಇದರಿಂದ ಆ ಕಂಪನಿಗಳು ನಿಮ್ಮ ಮಾಹಿತಿಯನ್ನು ಕದ್ದು ಬೇರೆ ಕಂಪನಿಗಳಿಗೆ ಮಾರುತ್ತಾರೆ ಉದಾಹರಣೆಗೆ ನೀವು ಮೊಬೈಲ್ ಅನ್ನು ಗೂಗಲ್ ನಲ್ಲಿ ಹುಡುಕಿದಾಗ ಅದೇ ಜಾಹೀರಾತು ಎಲ್ಲಾ ಅಪ್ಲಿಕೇಷನ್ ಅಲ್ಲಿ ಬರುತ್ತಿರುತ್ತದೆ ಇದಕ್ಕಾಗಿ ಹುಷಾರಾಗಿರಿ)
ಇದನೆಲ್ಲ ಹೇಗೆ ಆಫ್ ಮಾಡುವುದು ?
ಸೆಟಿಂಗ್ಸ್ -> ಅಪ್ಲಿಕೇಷನ್ -> ಪರ್ಮಿಷನ್ ಅಲ್ಲಿ ಒಮ್ಮೆ ಎಲ್ಲಾ ಆಪ್ ಅನ್ನು ಚೆಕ್ ಮಾಡಿ. ಬೇಡದಿರುವ ಪರ್ಮಿಷನ್ ಗಳನ್ನು ಎ ಕೂಡಲೇ ಆಫ್ ಮಾಡಿ
ಕ್ರೋಮ್ ನಲ್ಲಿ spacenews.online ಅನ್ನು ಓಪನ್ ಮಾಡಿ ನೋಟಿಫಿಕೇಷನ್ ಆನ್ ಮಾಡಿಕೊಳ್ಳಿ ನಾವು ಬರೆಯುವ ಎಲ್ಲಾ ಆರ್ಟಿಕಲ್ ಅನ್ನು ನೋಟಿಫಿಕೇಷನ್ ಮುಖಾಂತರ ಪಡೆಯಿರಿ