'ಶಿಕ್ಷಣ ಅನ್ನುವ ಪದಕ್ಕೆ ಸಮಾರ್ಥಕ ಪದ ಈಗ ವ್ಯವಹಾರ', ವಿಟಿಯುನಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ವಿದ್ಯಾರ್ಥಿಗಳು 

credit:google images
ಈಗ ಏನಾಗಿದ್ದಾರೆ? ಅಂತ ಯಾರನ್ನಾದರೂ ನೀವು ಕೇಳಿದರೆ ಬರುವ  ಉತ್ತರ 
1.ಯಾವುದೋ ಕಾಂಟ್ರ್ಯಾಕ್ಟ್ ನಲ್ಲಿ 15000 ಕ್ಕೆ ದುಡಿಯುತ್ತಿದ್ದಾನೆ, 
2.ಸ್ವಂತ ಅಂಗಡಿ ಮಾಡಿದ್ದಾನೆ,
3.ಟೀಚರ್ ಆಗಿ ಅದೇ ಕಾಲೇಜಿನಲ್ಲಿ ಕೆಲಸ ಮಾಡುತಿದ್ದಾನೆ,
4.ಇನ್ನೂ ಕೆಲಸಕ್ಕಾಗಿ ಹುಡುಕಾಟ ನಡೆಸುತಿದ್ದಾನೆ ಅದೆಲ್ಲ ಬಿಡಿ ಮೊನ್ನೆ ಯಾರೋ ಹೇಳುತಿದ್ದ 'ಬೆಂಗಳೂರಿನ ಮಜೆಸ್ಟಿಕ್ ನಲ್ಲಿ ನಿಂತು ಯಾರಿಗಾದರೂ ಕಲ್ಲು ಎಸೆದರೆ ಆ ಕಲ್ಲು ಒಬ್ಬ ಇಂಜಿನಿಯರ್ ಮೇಲೆ ಬಿದ್ದಿರುತ್ತದೆ' ಅಂತ,ಹಾಗಾದರೆ ಇಂಜಿನಿಯರ್ ಪದದ ಅರ್ಥ ಏನು? ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕ', ಬೇರೆ ಡಿಗ್ರೀ ಮಾಡಿದವರಿಗೂ ಇಂಜಿನಿಯರ್ ಮಾಡಿದ್ದವರಿಗು ವ್ಯತ್ಯಾಸ ಇಲ್ಲವಾ? ಹಾಗಾದರೆ VTUನ ಅಡಿ ಪದವಿ ಪಡೆದ ಇಂಜಿನಿಯರ್ಗಳು ಕಾರ್ಮಿಕರಾಗಲು ಕಾರಣ ಏನು?GOOGLE,APPLE,AMAZON,FLIPKART,UBER ಗಳಂತಹ ಕಂಪನಿಯನ್ನು ಹುಟ್ಟುಹಾಕಿದ ವಿದ್ಯಾರ್ಥಿಗಳು oxford ಅಥವಾ iit ಗಳೇ ಏಕೆ? ಹಾಗಾದರೆ VTU ಅಡಿ ಕಲಿತ ವಿದ್ಯಾರ್ಥಿಗಳಿಂದ ಏಕೆ ಇದೆಲ್ಲ ಸಾದ್ಯ ಇಲ್ಲ ?
    ಈ ಎಲ್ಲದಕ್ಕೂ ಕಾರಣ iit ಮತ್ತು oxford ನಲ್ಲಿ  ಕಲಿಸುವ ಪಠ್ಯಕ್ರಮ syllabus ನಲ್ಲಿ ಮುಂದೆ ಬೇಕಾಗುವ ಮತ್ತು ಈಗಿನ  ಟೆಕ್ನಾಲಜಿ ಬಗ್ಗೆ ಕಲಿಯುತ್ತಾರೆ, ಆದರೆ VTU ನಲ್ಲಿನ ವಿದ್ಯಾರ್ಥಿಗಳು ಪುಸ್ತಕದಲ್ಲಿರುವ ಮತ್ತು ಲ್ಯಾಬ್ ಗಳಲ್ಲಿ ಕಲಿತ ಯಾವ ವಿಷ್ಯವೂ ಕೆಲಸಕ್ಕೆ ಬರುವುದಿಲ್ಲ ಉದಾಹರಣೆಗೆ  ಒಬ್ಬ ಇಲೆಕ್ಟ್ರಾನಿಕ್ ಇಂಜಿನಿಯರ್  ಕಂಪ್ಯೂಟರ್ ತಯಾರು ಮಾಡುವುದಿರಲಿ ಅದರ ಒಳಗಿನ ಯಾವುದೊಂದು  ವಸ್ತುವಿನ ಅದರಲ್ಲೂ ಇಲೆಕ್ಟ್ರಾನಿಕ್ ವಸ್ತುವಿನ ಬಗ್ಗೆ ಸ್ವಲ್ಪವೂ ಜ್ಞಾನ ಇರದಿದ್ದರೆ ಅವನು ಇಲೆಕ್ಟ್ರಾನಿಕ್ ಇಂಜಿನಿಯರ್ ಆಗಿ ಏನು ಪ್ರಯೋಜನ? ಇಲ್ಲಿ ತಪ್ಪು ಕಲಿತ ವಿದ್ಯಾರ್ಥಿಯದ ಅಥವಾ ಕಳಿಸಿದ ವಿದ್ಯಾಲಯದ್ದ ?  ದೊಡ್ಡ ದೊಡ್ಡ ತಯಾರಕ ಕಂಪನಿಗಳು ಇವರನ್ನು ಕರೆದು ಹೇಗೆ ಕೆಲಸ ಕೊಡುತ್ತಾರೆ ಇಂಟರ್ವ್ಯೂ ಗೆ ಹೋದರೆ ಏಕೆ ಎಕ್ಸ್ರಪೀರಿಯನ್ಸ್ ಬಗ್ಗೆ ಮಾತಾಡುತ್ತಾರೆ ಅಂತ ನೀವೇ ಅರ್ಥ ಮಾಡಿಕೊಳ್ಳಿ ಈಗಿರುವ ತಂತ್ರಜ್ಞಾನದ ಬಗ್ಗೆ ತಾಂತ್ರಿಕ ಕಾಲೇಜಿನಲ್ಲೇ ಹೇಳಿಕೊಡದಿದ್ದರೆ ತಂತ್ರಜ್ಞಾನದ ಅರಿವು ಬರಲು ಹೇಗೆ  ಸಾದ್ಯ?  

credit:google images

      ಇನ್ನೂ ಈಗ ಕರೋನಾ ಎಂಬ ವೈರಾಣು ಹರಡುತ್ತಿರುವ ಪರಿಸ್ಥಿತಿಯಲ್ಲೂ ಇವರಿಗೆ ಎಕ್ಸಾಮ್ ಏಕೆ ತುಂಬಾ ಅವಶ್ಯಕ ?
ಕಾರಣ ಒಂದೇ ಹಣ ವಿದ್ಯಾರ್ಥಿಗಳು ಕಟ್ಟುವ ಪರೀಕ್ಷೆಯ ಶುಲ್ಕ ಪ್ರತಿ ವಿದ್ಯಾರ್ಥಿ 1295 ರೂ ಪಾವತಿಸಬೇಕು. ಕಾಲೇಜಿನ ಶುಲ್ಕ ಪಾವತಿಸಿದ ನಂತರವೂ ವರ್ಷಕ್ಕೆ ಎರಡೂ ಬಾರಿ, ಪ್ರತಿ ವಿದ್ಯಾರ್ಥಿ ರೂ 1295/-  ಒಟ್ಟು  325000 ವಿದ್ಯಾರ್ಥಿಗಳು ಅಂದರೆ ಪ್ರತಿ 6 ತಿಂಗಳಿಗೆ 42,18,50,000/- ರೂಪಾಯಿ ಇದನ್ನು ಬಿಡಿ ಯಾವ ವಿದ್ಯಾರ್ಥಿ ಆಗಲಿ ಅವನು ಬರೆದಿರಿವ ವಿಷಯದಲ್ಲಿ  ಸಾಮಾನ್ಯವಾಗಿಯೇ 6 ವಿಷಯದಲ್ಲಿ 3-4 ವಿಷಯ ಫೈಲ್ ಆಗುತ್ತಾನೆ ಮತ್ತೆ 400/- ರೂ ಗಳು ಕಟ್ಟಿ ಮರು ಮೌಲ್ಯಮಾಪನ ಮಾಡಿಸಿದರೆ ಪಾಸ್ ಆಗುತ್ತಾನೆ ಮರು ಮೌಲ್ಯಮಾಪನವಾಗಿ ಪಾಸ್ ಆದ ನಂತರ ಹಣ ಹಿಂತಿರುಗಿಸುವುದಿಲ್ಲ ಅಂದರೆ ಅರ್ಥ    ಮಾಡಿಕೊಳ್ಳಿ ಎಷ್ಟು  ಕೋಟಿ ಹಣ ಸಂಗ್ರಹ ವಾಗಬಹುದು. ಈ ದುಡ್ಡಿನ ದುರಾಸೆಯಿಂದ ವಿದ್ಯಾರ್ಥಿಗಳ ಭವಿಷ್ಯದ ಚಿಂತನೆಯಿಂದ  ಸರಿಯಾದ ತಾಂತ್ರಿಕ ಶಿಕ್ಷಣವನ್ನೇ ಕೊಡದ ಇವರು ಈಗ ಈ ಸಾವು ನೋವಿನ ನಡುವೆಯೂ ದುಡ್ಡಿನ ಅಮಲಿನಿಂದ ವಿದ್ಯಾರ್ಥಿಗಳ ಪ್ರಯಾಣಕ್ಕೆ ತೊಂದರೆಯಾಗುವ ಕೆಲಸಕ್ಕೆ ಕೈ ಹಾಕಿದ್ದಾರೆ, ಇವರಿಗೆ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ನಿಜವಾಗಿಯೂ ಇದ್ದರೆ ಈಗ ಎಲ್ಲಾ ಮಕ್ಕಳನ್ನು 35 ಅಂಕ ಕೊಟ್ಟು ಪಾಸ್ ಮಾಡಲಿ ಮತ್ತೆ ಕರೋನಾ ಮುಗಿದ ನಂತರ  ಹೆಚ್ಚು ಅಂಕ ಬೇಕಾಗಿರುವ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಇಡಲಿ, ಇದರಿಂದ ಯಾವ ತೊಂದರೆಯೂ ಬರುವುದಿಲ್ಲ ಯಾವ ವಿದ್ಯಾರ್ಥಿಯು ಇದನ್ನು ವಿರೋಧಿಸುವುದಿಲ್ಲ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ದಯವಿಟ್ಟು ದುಡ್ಡಿಗಾಗಿ ವಿದ್ಯಾರ್ಥಿಗಳ ಜೀವ ಕೇಳಬೇಡಿ. 


***ಇಂತಹ ಕುತೂಹಲಕಾರಿಯಾದ ಮಾಹಿತಿಯನ್ನು ಪಡೆಯಲು ನಮ್ಮ instagram & facebook ಗೆ ಫೋಲ್ಲೋ ಮಾಡಿ***