ಅನಂತ ಬ್ರಂಹಾಂಡವೇ ಹಾಗೆ ಕೊನೆಯೇ ಇಲ್ಲದ ಹುಡುಕಾಟ ಇದಕ್ಕೆ ಹಾದಿಯೂ ಇಲ್ಲ ಅಂತ್ಯವೂ ಇಲ್ಲ , ಮೊನ್ನೆ ಬರೆದ ಶನಿ ಗ್ರಹಕ್ಕೆ ಹೋಲುವ ಇನ್ನೊಂದು ಗ್ರಹ ಸೂಪರ್ ಸ್ಯಾಟರ್ನ ಮತ್ತು ಅದಕ್ಕೆ ಇರುವ ಅತೀ ದೊಡ್ಡದಾದ ರಿಂಗ್ ಬಗ್ಗೆ ಬರೆದಿದ್ದೆ ಓದಿಲ್ಲ ಅಂದರೆ ಒಮ್ಮೆ ಓದಿ ಲಿಂಕ್
Credits:  NASAJPL-CaltechR. Hurt

            ಈ ಗ್ರಹದ ಹೆಸರು ಕೆಪ್ಲರ್ 16-b ನಿಮಗೊಂದು ಪ್ರಶ್ನೆ ಉದ್ಭವಿಸಬಹುದು ಹೇಗಪ್ಪಾ ಈ ಗ್ರಹಕ್ಕೆ ಕೆಪ್ಲರ್ ಅಂತಾನೆ ಹೆಸರಿಟ್ಟರು ಅಂತ ಕಾರಣ ಈ ಗ್ರಹವನ್ನು ಪತ್ತೆ ಮಾಡಿದ್ದು ನಾಸಾದ ಕೆಪ್ಲರ್ ಎಂಬ ಟೆಲಿಸ್ಕೋಪ್ ಸಹಾಯದಿಂದ  ಅದಕ್ಕಾಗಿ ಈ ಗ್ರಹಕ್ಕೆ ಈ ಹೆಸರು ಬಂತು, ಈ ಕೆಪ್ಲರ್ ಸ್ಪೇಸ್  ಟೆಲಿಸ್ಕೋಪ್ ಬಾಹ್ಯಾಕಾಶದಲ್ಲಿ ಅಂದರೆ ನಮ್ಮ ಸ್ಯಾಟಿಲೈಟ್ ಗಳಂತೆ ಭೂಮಿಯ ಮೇಲಿನ  ಒಂದು ಕಕ್ಷೆಯಲ್ಲಿ ಕಾರ್ಯ ನಿರ್ವಹಿಸುತ್ತವೆ, ಬಾಹ್ಯಾಕಾಶ ವಿಜ್ಞಾನಿಗಳು ಹೇಗೆ ಬೇಕೋ ಹಾಗೆ ಅದನ್ನು ಇಲ್ಲಿಂದಲೇ ತರಂಗಗಳ ಮೂಲಕ ಕಂಟ್ರೋಲ್ ಮಾಡಿಕೊಳ್ಳುತಾರೆ,
        ಕೆಪ್ಲರ್ 16-b ಈ ಗ್ರಹ ಭೂಮಿಯಿಂದ ಸುಮಾರು 200 ಜ್ಯೋತಿರ್ವರ್ಷಕಿಲೋಮೀಟರ್ ಗಳಷ್ಟು ದೂರವಿದೆ ಎರಡು ಸೂರ್ಯ ಅಂದರೆ ಕೆಳಗೆ ತೋರಿಸಿರುವ ಚಿತ್ರದಂತೆ ನಕ್ಷತ್ರಗಳಿದ್ದು ಎರಡೂ ಸಹ ನಮ್ಮ ಸೂರ್ಯನಿಗಿಂತ ಚಿಕ್ಕದಾಗಿವೆ 

            ಒಂದು (A) ನಮ್ಮ ಸೂರ್ಯನ 69 ಭಾಗದಷ್ಟಿದ್ದರೆ ಇನ್ನೊಂದು (B)ಕೇವಲ 20ರಷ್ಟಿದೆ, ನಮ್ಮ ಸೂರ್ಯ ಮದ್ಯದಲ್ಲಿ ತನ್ನನ್ನು ತಾನು ಸುತ್ತಿಕೊಂಡು ಒಂದೇ ಜಾಗದಲ್ಲಿ ಇರುತ್ತಾನೆ ಆದರೆ ಈ ಎರಡು ನಕ್ಷತ್ರ ಗಳು  ಭೂಮಿಯಂತೆ ಒಂದು ಕಕ್ಷೆಯಲ್ಲಿ ತನ್ನನ್ನು ತಾನು ಸುತ್ತುತ್ತ ಎರಡೂ ಒಂದೇ ಕಕ್ಷೆಯಲ್ಲಿ ಸುತ್ತುತ್ತವೆ ಅದರಲ್ಲಿ ಒಂದು ಗ್ರಹದ ಚಲನೆಯಲ್ಲಿ ನಿದಾನವಾದರೂ ಮುಂದೊಂದು ದಿನ ಒಂದಕ್ಕೊಂದು ಡಿಕ್ಕಿ ಹೊಡೆದುಕೊಳ್ಳುವುದರಲ್ಲಿ ಸಂಶಯವಿಲ್ಲ ,
      ABb  ಅನ್ನುವುದು ಒಂದು ಗ್ರಹ ವಿಚಿತ್ರ ವೇನೆಂದರೆ ಈ ಎರಡು ಸೂರ್ಯನಿರುವ ಮಂಡಲದಲ್ಲಿ ಒಂದೇ ಒಂದು ಗ್ರಹವಿದೆ ಎಂದು ಹೇಳಿದ್ದಾರೆ ಈ ವಿಷಯ ನಾನು ನಂಬುವುದುದಿಲ್ಲ ಏಕೆಂದರೆ ನಮ್ಮ ಸೌರಮಂಡಲದಲ್ಲೇ ಪ್ಲುಟೊವನ್ನ ಒಮ್ಮೆ ಗ್ರಹ ಅಂತ ಕರೆಯುತ್ತಾರೆ ಒಮ್ಮೆ ಇಲ್ಲ ಅಂತ ಹೇಳುತ್ತಾರೆ ಇನ್ನೂ ಅಷ್ಟು ದೂರವಿರುವ ಮಂಡಲದ ಬಗ್ಗೆ ಹೇಗೆ ಖಚಿತವಾಗಿ ಹೇಳಲು ಸಾದ್ಯ ?
ನನ್ನ ಪ್ರಕಾರ ಅಲ್ಲಿ ಇನ್ನೂ ಗ್ರಹಗಳು ಇದ್ದರೂ ಇರಬಹುದು ಇಲ್ಲದೆಯೂ ಇರಬಹುದು, ಕಾರಣ  ಅಂತರಿಕ್ಷದ ಬಗ್ಗೆ ಖಚಿತವಾಗಿ ಹೇಳುವ ತಾಂತ್ರಜ್ಞಾನ ಇನ್ನೂ ಮುಂದುವರೆದಿಲ್ಲ. 
       ಇನ್ನೂ ಈ ಗ್ರಹ ಕಲ್ಲು ಮತ್ತು ಅನಿಲದಿಂದ ಆವೃತವಾಗಿದ್ದು ಈ ಸಂಶೋದನೆಯನ್ನು ನಿರ್ವಹಿಸುವ ವಿಜ್ಞಾನಿ william boruchki ಅವರು ಒಂದೇ ನಕ್ಷತ್ರದ ಸುತ್ತಾ ಸುತ್ತುವ ಗ್ರಹಗಳಲ್ಲಿ ಜೀವ ಸಂಕುಲ ಇರಬಹುದು ಎಂಬ ಒಂದೇ ನಂಬಿಕೆಯನ್ನು ಕೈ ಬಿಡಬೇಕು ಏಕೆಂದರೆ ಇಂತಹ ವಾತಾವರಣ ವಿರುವ ಗ್ರಹಗಳಲ್ಲೂ ಜೀವ ಸಂಕುಲ ಇರಬಹುದು ಎಂದು ಹೇಳಿದ್ದಾರೆ,

 ************************space news kannada*******************************

       ನನಗೆ ಒಂದು ಬೇಜಾರಿನ ಸಂಗತಿ ಅಂದರೆ ನನಗೆ ಬಾಹ್ಯಾಕಾಶ  ಅಂತರಿಕ್ಷ ಇದರ ಬಗ್ಗೆ ಆಸಕ್ತಿ  ಆದರೆ ಇವುಗಳ ಬಗ್ಗೆ ಕನ್ನಡದಲ್ಲಿ ಮಾಹಿತಿ ಸಿಗುತಿರಲಿಲ್ಲ ಸಿಕ್ಕಿದರೂ ಅತೀ ಕಡಿಮೆ, ನನಗಾದ ಕೊರತೆ ಇದರಲ್ಲಿ ಆಸಕ್ತಿ ಇರುವವರಿಗೆ  ಆಗಬಾರದೆಂಬುದು ನಮ್ಮ spacenews ಆಶಯ ನಮಗೆ ತಿಳಿದಷ್ಟು ನಾವು ನಿಮಗೆ ತಿಳಿಸುತ್ತೇವೆ, ಯಾರಿಗೆಲ್ಲ ಇಂತಹವುದರಲ್ಲಿ ಆಸಕ್ತಿ ಇರುತ್ತವೆಯೋ ಅವರಿಗೆ ಇದನ್ನು ಷೇರ್ ಮಾಡಿ, ಇಂತಹ ಆಸಕ್ತಿದಾಯಕ ಮಾಹಿತಿಯನ್ನು ಪಡೆಯಲು ನೋಟಿಫಿಕೇಷನ್ ಒನ್ ಮಾಡಿಕೊಳ್ಳಿ ಮತ್ತು  chrome ನಲ್ಲಿ add to home sceen  ಮಾಡಿಕೊಳ್ಳಿ ಅಥವಾ instagram &  facebook ಗೆ  ಫೋಲ್ಲೋ ಮಾಡಿ