ಡಿಮೆ ಬೆಲೆಯಲ್ಲಿ ಹೆಚ್ಚು ಫೀಚರ್ ಗಳ ಮೂಲಕ ಎಲ್ಲಾ ಬ್ರಾಂಡ್ ಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿರುವ redmi ಫೋನ್ ಗಳ  ಬಗ್ಗೆ 
ಎಲ್ಲರಿಗೂ ಗೊತ್ತೇ ಇದೆ. ಈಗ amazon ನಲ್ಲಿ  Redmi note 9 pro ನ ಬೆಲೆ ಈಗ ಇಳಿದಿದ್ದು ಇದೆ PUBG ಮೊಬೈಲ್ ಆಟಗಾರರಿಗೆ ಅತ್ಯುತ್ತಮವಾಗಿದೆ. ಮತ್ತು ಇದರ ಬೆಲೆ 4-64GB ಗೆ 13,999/- ರೂಗಳಲ್ಲಿ ಲಭ್ಯವಿದೆ.
 
      ಕೆಲವರಿಗೆ ಫೋನ್ ಒಳಗಿನ ಪ್ರಾಸೆಸರ್ ಯಾವುದು? ಬ್ಯಾಟರಿ ಕತೆ ಹೇಗೆ? ಫಾಸ್ಟ್ ಛಾರ್ಜಿಂಗ್ ಅಂದರೆ ಏನು? amoled ಡಿಸ್ಪ್ಲೇ ಹೇಗೆ? ಇರುವ ನಾಲ್ಕು ಕ್ಯಾಮೆರಾ ಹೇಗೆ ಕೆಲಸ ಮಾಡುತ್ತವೆ? ಎಂಬುದು ತಿಳಿದಿರುವುದಿಲ್ಲ ಇನ್ನೂ ಕೆಲವರಿಗೆ ಈ ವಿಷಯಗಳು ಬೇಕಾಗಿರುವುದಿಲ್ಲ, ದುರಾದೃಷ್ಟ ಎಂದರೆ ಇಂತಹ ಮಾಹಿತಿಗಳು ಇಂಗ್ಲೀಷ್ ಹಾವಳಿಯಿಂದ  ಕನ್ನಡದಲ್ಲಿ  ದೊರಕುವುದು ಬಹಳ ಕಡಿಮೆ. ಸ್ಪೇಸ್ ಮತ್ತು  ಟೆಕ್ನಾಲಜಿಯಂತಹ ಮಾಹಿತಿಯನ್ನು ಕನ್ನಡದಲ್ಲಿ ಪೂರೈಸುವುದು ನಮ್ಮ ಆಶಯ ಇದಕ್ಕಾಗಿ ಕನ್ನಡಿಗರಾದ ನಿಮ್ಮ ಸಪೋರ್ಟ್ ಬಹಳ ಬೇಕಾಗಿದೆ ಇದಕ್ಕಾಗಿ ನೀವು ಕ್ರೋಮ್ ಅಲ್ಲಿ ನಮ್ಮ www.spacenews.online ಅನ್ನು ಓಪನ್ ಮಾಡಿ ಬೆಲ್ ಐಕನ್ ಪ್ರೆಸ್ ಮಾಡಿ ನೋಟಿಫಿಕೇಷನ್ ಆನ್ ಮಾಡಿಕೊಂಡರೆ ಸಾಕು.
 
ಬ್ಯಾಟರಿ ಮತ್ತು ಪ್ರಾಸೆಸರ್ 
            ಮೊದಲನೆಯದಾಗಿ ಈ ಮೊಬೈಲ್ 5020 mah ಬ್ಯಾಟರಿ ಕ್ಯಪಾಸಿಟಿ ಹೊಂದಿದ್ದು   Qualcomm Snapdragon 720gಯ 2.3GHz ನ 8 ಕೋರ್ ನ ಪ್ರಾಸೆಸರ್ ಹೊಂದಿದೆ,

(ಬ್ಯಾಟರಿ ಮತ್ತು ಪ್ರಾಸೆಸರ್ ಮೊಬೈಲ್ ಕೊಳ್ಳುವ ಮೊದಲು ಗಮನಿಸಬೇಕಾದ ಅಂಶ ಮೊಬೈಲ್ ನಲ್ಲಿ ಒಳ್ಳೆಯ ಪ್ರಾಸೆಸರ್ ಇದ್ದರೆ ಹ್ಯಾಂಗ್ ಆಗುವುದಿಲ್ಲ ಜೊತೆಗೆ ಒಳ್ಳೆಯ ಪರ್ಫಾರ್ಮೆನ್ಸ್ ಕೊಡುತ್ತದೆ .
ಉದಾರಣೆಗೆ ಸ್ಯಾಮ್ಸಂಗ್ ಹ್ಯಾಂಗ್ ಆಗಲು ಕಾರಣ ಅವರದ್ದೇ ಆದ  exynoss ಎಂಬ ಪ್ರಾಸೆಸರ್ಆದರೆ redmi realme ಅಂತಹ ಕಂಪನಿಗಳು Qualcomm ಅವರ ಹತ್ತಿರ ಪಡೆದು ಹಾಕುತ್ತಾರೆ,Qualcomm Snapdragon ಮೊಬೈಲ್ ಗೆ ಒಳ್ಳೆ ಪ್ರಾಸೆಸರ್ ನೀಡುವ ಕಂಪನಿ ಮೊದಲ ಆದ್ಯತೆ  Qualcomm ಎರಡನೇ ಆದ್ಯತೆ mediatek  )

ಕ್ಯಾಮೆರಾ 
          ಹಿಂಬದಿ 4 ಕ್ಯಾಮೆರಾ ಹೊಂದಿದ್ದು 48 -8-5-2 ಮೆಗಾಪಿಕ್ಸೆಲ್. 
 48 MP  ಫೋಟೋ ಮಾತ್ರ ತೆಗೆಯುವ ಕೆಲಸ ಮಾಡುತ್ತದೆ,8MP  ಸೆನ್ಸಾರ್ ವಿಸ್ತಾರವಾಗಿ ಎಲ್ಲವನ್ನೂ ಸೆರೆಹಿಡಿಯಲು ಸಹಾಯಕವಾಗುತ್ತದೆ, 5MP ಹಿಂಬದಿ ಜಾಗವನ್ನು ಬ್ಲರ್ ಮಾಡಿಕೊಡಲು ಸಹಾಯವಾದರೆ ಇನ್ನೊಂದು 2MP ಸೂಕ್ಷ್ಮವಾದ ಪಿಕ್ಚರ್ ಅನ್ನು ಸೆರೆಹಿಡಿಯಲು ಸಹಾಯಕವಾಗಿದೆ. 
    ಮುಂಬದಿಯ ಕ್ಯಾಮೆರಾ ಸೇಲ್ಫಿ ತೆಗೆಯಲು ಮತ್ತು ಫೇಸ್ ಲಾಕ್  ಗಾಗಿ 16MP ಕ್ಯಾಮೆರಾ ಹುಡುಗಿಯರ ಹಣೆಬೊಟ್ಟಿನಂತೆ  ಡಿಸ್ಪ್ಲೇಯ ಮೇಲಿನ ಮಧ್ಯಬಾಗದಲ್ಲಿದೆ,  
ಮತ್ತು ಮಾಮೂಲಿನಂತೆ ಜೋಡಿ ಫ್ಲಾಶ್ ಹೊಂದಿದೆ 

ಡಿಸ್ಪ್ಲೇ 
       6.67 ಇಂಚಿನ ಫೋನ್ ಇದಾಗಿದ್ದು FHD+ ರೆಸಲ್ಯೂಷನ್  ಒಳ್ಳೆಯ ವಿಡಿಯೋ ಮತ್ತು ಪಿಕ್ಚರ್ ತೋರಿಸಲು ಸಹಾಯಕವಾಗಿದೆ,
ಇದರಲ್ಲಿ ಡಿಸ್ಪ್ಲೇ ಯ ಸುರಕ್ಷತೆಗಾಗಿ ಗೊರಿಲ್ಲಾ ಗ್ಲಾಸ್ 5 ಅನ್ನು ಡಿಸ್ಪ್ಲೇ ಜೊತೆಯಲ್ಲೇ ಬಂದಿರುತ್ತದೆ, ಹಾಗಂತ ಪರೀಕ್ಷೆಗಾಗಿ ಟಿವಿಯಲ್ಲಿ ತೋರಿಸುವಂತೆ ಕೆಳಗೆ ಹಾಕಬೇಡಿ. 

ಇತರೆ ಹೆಚ್ಚಿನ ಮಾಹಿತಿ  
     ಈ  ಫೋನಿನಲ್ಲಿ ಈ ಹಿಂದಿನ ಫೋನಿನಂತೆ ಹಿಂಬದಿ fingerprint ಸೆನ್ಸಾರ್ ಇಲ್ಲ  ಪವರ್ ಬಟನ್ ನ ಜೊತೆ-ಜೊತೆಗೆ
  fingerprint ಸೆನ್ಸಾರ್ ನೀಡಿರುವುದರಿಂದ ಅನ್ ಲಾಕ್ ಮಾಡಲು ಸುಲಭವಾಗುತ್ತದೆ,
ಮತ್ತು ಈ ಫೋನಿನ ಬಾಕ್ಸ್ ನಲ್ಲಿ ಬೇಕಾಗಿರುವ ಫಾಸ್ಟ್  ಚಾರ್ಜರ್  ಮತ್ತು ಅದರ c ಕೇಬಲ್, ಸಿಮ್ ತೆಗೆದು ಹಾಕಲು ಅದರ ಪಿನ್, ಫೋನಿನ ಸುರಕ್ಷತೆಗೆ ಒಂದು ಬ್ಯಾಕ್ ಕವರ್ ಮತ್ತು ಯಾವತ್ತೂ  ಉಪಯೋಗಕ್ಕೆ  ಬಾರದ  ವಾರೆಂಟಿ ಕಾರ್ಡ್ ಮತ್ತು ಯೂಸರ್ ಮಾನ್ಯುಯಲ್. 
ಯಾವುದೇ ಯೋಚನೆ ಮಾಡದೆ ಕರೀದಿ ಮಾಡಬಹುದಾದ ಫೋನ್ ಇದಾಗಿದೆ 
ಈ ಫೋನ್ ಆನ್ಲೈನ್ ಅಲ್ಲಿ ಲಭ್ಯವಿರುವ ಕಾರಣ ನೀವು amazon ನಲ್ಲಿ ಖರೀದಿಮಾಡಿ ಲಿಂಕ್