ರಾತ್ರಿಯ ಆಕಾಶ ಯಾರಿಗೆ ಇಷ್ಟ ಆಗಲ್ಲ ಹೇಳಿ ಕೋಟ್ಯಂತರ ನಕ್ಷತ್ರ ಅದರ ಮಧ್ಯೆ ದೃಷ್ಟಿಬೊಟ್ಟಿನಂತೆ ಚಂದಿರ, ಸೂಕ್ಷ್ಮವಾಗಿ ಗಮನಿಸಲು ಕೂತರೆ ಅದೊಂದು ಅದ್ಭುತ, ಆದರೆ ನಮಗೆ ಅಲ್ಲಿರುವ ನಕ್ಷತ್ರಗಳು ಯಾವುದು?
ಅದು ನಕ್ಷತ್ರವೋ ಅದು ಗ್ರಹವೋ ಎಂಬುದು ಗೊತ್ತಾಗುವುದಿಲ್ಲ.
ಹತ್ತನೇ ತರಗತಿಯಲ್ಲಿನ ವಿಜ್ಞಾನ ಪುಸ್ತಕದಲ್ಲಿ ಓದಿ ತಿಳಿದಂತೆ "ಆಕಾಶದಲ್ಲಿ ಯಾವುದು ಮೀನುಗುತ್ತದೆಯೋ ಅದು ನಕ್ಷತ್ರ ಯಾವುದು ಮೀನುಗುವುದಿಲ್ಲ ಅದು ಗ್ರಹ" ಆದರೆ ಅಷ್ಟು ಆ ಎಂಟು ಗ್ರಹಗಳ ಮಧ್ಯೆ ಇಂತಹದ್ದೇ ಗ್ರಹ ಯಾವುದು ಅಂತ ಗೊತ್ತಾಗುವುದಿಲ್ಲ ಅದಕ್ಕಾಗಿ ಸ್ಕೈಮ್ಯಾಪ್ ಅನ್ನುವ ಆಪ್ ನ ಮುಖಾಂತರ ನೀವು ತಿಳಿಯಬಹುದಾಗಿದೆ, ಮತ್ತು
ನಮ್ಮ ವೆಬ್ಸೈಟ್ ನಲ್ಲೇ ಮೇಲಿನ ಬಲಗಡೆ ಕಾಣುವ ಮೆನು ವಿನಲ್ಲೂ ಸಹ ಎಲ್ಲಾ ಗ್ರಹಗಳ 3D ಚಿತ್ರಗಳನ್ನು ನೋಡಬಹುದಾಗಿದೆ.ಜೊತೆಗೆ ಸ್ಪೇಸ್ ಮ್ಯಾಪ್ ಸಹ ಇದೆ
ಆದರೆ ಆಪ್ ಅನ್ನು ಬಳಸುವುದು ಹೇಗೆ ? ಈ ಆಪ್ ಅನ್ನು ಯಾರು ಬೇಕಾದರೂ ಬಳಸಬಹುದು.
ಆಪ್ ಓಪನ್ ಮಾಡಿ ಮೊಬೈಲ್ ಅನ್ನ ಆಕಾಶದ ಕಡೆಗೆ ಮುಖ ಮಾಡಿಸಿದರಾಯಿತು ಆಕಾಶದಲ್ಲಿ ಕಾಣುವ ಒಂದೊಂದು ನಕ್ಷತ್ರ ಗ್ರಹ ಯಾವುದು ಅಂತ ಅದೇ ಹೇಳುತ್ತದೆ. ಈ ಆಪ್ ಅನ್ನು ನಂಬಲು ಅಸಾಧ್ಯ ಆದರೆ
ಉದಾಹರಣೆಗೆ ನೀವು ಚಂದ್ರನತ್ತ ನಿಮ್ಮ ಮೊಬೈಲ್ ತೋರಿಸಿದರೆ ನಿಮ್ಮ ಮೊಬೈಲ್ ನಲ್ಲೂ ಸಹ ಚಂದ್ರನ ನೀರ ದಿಕ್ಕಿನಲ್ಲೇ ಚಂದ್ರನ ಚಿತ್ರ ಮತ್ತು ಅಕ್ಕ ಪಕ್ಕ ಇರುವ ನಕ್ಷತ್ರ ಯಾವುದು ಅಂತ ತೋರಿಸುತ್ತದೆ.
ಆಪ್ ಅನ್ನು ಪ್ಲೇ ಸ್ಟೋರ್ ನಲ್ಲಿ ಹುಡುಕಲು ಕಷ್ಟವಾದರೆ ಪ್ಲೇಸ್ಟೋರ್ ಚಿತ್ರದ ಮೇಲೆ ಕ್ಲಿಕ್ ಮಾಡಿ.
ಇಂತಹ ಮಾಹಿತಿ ಎಲ್ಲ ನಮ್ಮ ಕನ್ನಡಿಗರಿಗೆ ಕನ್ನಡದಲ್ಲಿ ತಲುಪುಸಬೇಕೆಂಬ ಪ್ರಯತ್ನ. ಈ ಪ್ರಯತ್ನ ಇಷ್ಟವಾದರೆ ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ
ನಮ್ಮ instagram,twitter ಹಾಗೂ facebook ಪೇಜ್ ಗಳಿಗೆ ಫೋಲ್ಲೋ ಮಾಡಿ
ಸ್ಪೇಸ್ ನಲ್ಲಿ ಆಸಕ್ತಿ ಇದ್ದವರು ವಾಟ್ಸಪ್ಪ್ ಗ್ರೋಪ್ ಗೆ join ಆಗಬಹುದು.