ನವದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ಕಿತಾಪತಿ ಕುತಂತ್ರಿ ಚೀನಾದಿಂದ ಪರಿಸ್ಥಿತಿ ಉದ್ವಿಗ್ನವಾಗಿರುವ ಸಂದರ್ಭದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತೊಮ್ಮೆ ಡಿಜಿಟಲ್ ಸ್ಟ್ರೈಕ್ ಮಾಡಿದ್ದು, PUBG ಸೇರಿ ಚೀನಾದ 118 ಆ್ಯಪ್‌ಗಳನ್ನು ನಿಷೇಧಿಸಿದೆ. ಈ ಮೂಲಕ ಕುತಂತ್ರಿ ಚೀನಾಗೆ ಬಿಗ್ ತಿರುಗೇಟು ನೀಡಿದೆ.
ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ ಕಾಪಾಡುವ ಹಾಗೂ ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತದಲ್ಲಿ ಸುಮಾರು 33 ಮಿಲಿಯನ್ ಸಕ್ರಿಯ PUBG ಗೇಮ್ ಆಡುವವರಿದ್ದಾರೆ ಎಂದು ವರದಿಗಳು ತಿಳಿಸಿವೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದಂತೆ 118 ಆಪ್‌ಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ನಿಷೇಧಿಸಲಾಗಿದೆ. ಅವರು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆಯುಂಟು ಮಾಡುವ ಚಟುವಟಿಕೆಗಳಲ್ಲಿ ತೊಡಗಿದ್ದರು. ರಾಷ್ಟ್ರದ ಭದ್ರತೆಯ ಉದ್ದೇಶಕ್ಕಾಗಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.
ಸರಕಾರದ ಈ ಕ್ರಮವು ಕೋಟ್ಯಂತರ ಭಾರತೀಯ ಮೊಬೈಲ್ ಮತ್ತು ಇಂಟರ್ನೆಟ್ ಬಳಕೆದಾರರ ಹಿತಾಸಕ್ತಿಗಳನ್ನು ಕಾಪಾಡುತ್ತದೆ ಎಂದು ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ಕೆಲ ಮೊಬೈಲ್
ಅಪ್ಲಿಕೇಶನ್‌ಗಳು ಬಳಕೆದಾರರ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಹಲವಾರು ದೂರುಗಳು ಬಂದಿದ್ದವು ಎಂದು ತಿಳಿಸಿದೆ.
ಗೃಹ ಸಚಿವಾಲಯದ ಸೈಬರ್ ಅಪರಾಧ ಕೇಂದ್ರವು ಸಹ ಈ ದುರುದ್ದೇಶಪೂರಿತ ಆಪ್‌ಗಳನ್ನು ನಿರ್ಬಂಧಿಸಲು ಶಿಫಾರಸು ಮಾಡಿದೆ ಎಂದು ಸರಕಾರ ತಿಳಿಸಿದೆ. ಈ ಹಿಂದೆಯೂ ಕೂಡ ಎರಡು ಬಾರಿ ಸರಕಾರ ಡಿಜಿಟಲ್ ಸ್ಟ್ರೈಕ್ ಮೂಲಕ ಟಿಕ್‌ಟಾಕ್, ಹೆಲೋ, ಶೇರ್‌ಚಾಟ್ ಸೇರಿ ಚೀನಾ ಮೂಲದ ಅನೇಕ ಆಪ್‌ಗಳನ್ನು ಕೇಂದ್ರ ಸರಕಾರ ನಿಷೇಧಿಸಿತ್ತು.
ಇಲ್ಲಿ ಬಹುಮುಖ್ಯ ಸಂಗತಿ ಏನೆಂದರೆ ಇಂಟರ್ನೆಟ್ ಸರ್ವೀಸ್ ಪ್ರೊವೈಡರ್ ಗಳಿಗೂ ಸಹ ವಾರ್ನಿಂಗ್ ನೀಡಲಾಗಿದೆ, ಈ ಕಾರಣದಿಂದಾಗಿ ಬೇರೆ ವೆಬ್ಸೈಟ್ಗಳಿಂದ ಡೌನ್ಲೋಡ್ ಮಾಡಿದರು ಮತ್ತು ವಿ ಪಿ ಎನ್ ಬಳಕೆಮಾಡಿದರು ಸಹ PUBG ಬಳಸುವುದು ಅಸಾಧ್ಯದ ಸಂಗತಿ.
PUBG ಇಲ್ಲದಿದ್ದರೆ ಏನಂತೆ ಪ್ಲೇ ಸ್ಟೋರ್ ನಲ್ಲಿ ಸಾವಿರ ಗೇಮ್ ಗಳಿವೆ ದೇಶಕ್ಕಿಂತ ದೊಡ್ಡದು ಏನಿದೆ?