ಈ ಸಂಪೂರ್ಣ ವರದಿಯನ್ನು ಮತ್ತು ಇಂತಹ ಕೂತೂಹಲ ಮಾಹಿತಿಯನ್ನು ದಿನನಿತ್ಯ ಪಡೆಯಲು ಸ್ಪೇಸ್ ನ್ಯೂಸ್ ಅನ್ನು ಫಾಲೋ ಮಾಡಿ
ಇಲ್ಲಿ ನಾವು ಮುಖ್ಯವಾಗಿ ತಿಳಿದುಕೊಳ್ಳಬೇಕಾಗಿರುವ ವಿಷ್ಯ ಚೀನಾ ಮತ್ತು ಭಾರತದ ಮದ್ಯೆ ಇರುವ ಸುಮಾರು 3600 ಕಿಲೋಮೀಟರ್ ಗಳಷ್ಟು ಇರುವ ಗಡಿಯ ಮದ್ಯೆ ಎರಡೂ ದೇಶಗಳ ಮದ್ಯೆ ವಿವಾದ ಇದೆ, ಹೀಗಾಗಿ ಇದನ್ನ ವಾಸ್ತವ ನಿಯಂತ್ರಣ ರೇಖೆ (lಲೈನ್ ಆಫ್ ಕಂಟ್ರೋಲ್)
ಅಂತ ಕರೆಯಲಾಗುತ್ತದೆ ಈ ಗಡಿ ರೇಖೆ ಕಾಶ್ಮೀರ,ಹಿಮಾಚಲ ಪ್ರದೇಶ ಉತ್ತರಾಖಂಡ,ಸಿಕ್ಕಿಂ ಮತ್ತು ಅರುಣಾಚಲಪ್ರದೇಶದ ಮೇಲೆ ಹಾದು ಹೋಗುತ್ತದೆ, ಜಮ್ಮುಕಾಶ್ಮೀರ ಪ್ರದೇಶದ ಅಕ್ಸಇನ್ಚಿನ್
ಪ್ರದೇಶವನ್ನು ಚೀನಾ ಆಕ್ರಮಿಸಿ ಕೊಂಡಿತ್ತು ಆದರೆ ಭಾರತ ಅದ ಭೂ ಬಾಗವನ್ನು ನಮ್ಮದು ಎಂದು ಹೇಳಿಕೊಳ್ಳುತ್ತೆ ಆದರೆ ಚೀನಾ ನಮ್ಮ ರಾಜ್ಯವಾದ ಅರುಣಾಚಲ ಪ್ರದೇಶವನ್ನು ಟಿಬೇಟ್ ಪ್ರಾಂತ್ಯದ್ದು ಎಂದು ಹೇಳಿಕೊಳ್ಳುತ್ತಾರೆ.
ಟಿಬೆಟ್ ಅನ್ನು ಚೀನಾ ಆಕ್ರಮಿಸಿ ಕೊಂಡಮೇಲೇ ಅರುಣಾಚಪ್ರದೇಶ ನಮ್ಮದು ಎಂದು ಕ್ಯಾತೆ ತೆಗಿತಾ ಇದೆ.
ಅಲ್ಲಿಂದ ಇಲ್ಲಿಯತನಕ ಗಡಿಯನ್ನು ಸರಿಯಾಗಿ ಗುರುತಿಸುವ ಕೆಲಸ ಆಗಿಲ್ಲ ಇದಕ್ಕಾಗಿ ಲೈನ್ ಆಫ್ ಕಂಟ್ರೋಲ್ ವ್ಯವಸ್ಥೆ ಜಾರಿಯಲ್ಲಿದೆ
ಎಷ್ಟೋ ಕಡೆ ಎರಡೂ ದೇಶಗಳ ಮದ್ಯೆ ಸರಿಯಾದ ಬೇಲಿ ಸಹ ಇಲ್ಲ ಅದಕ್ಕಾಗಿ ಗುರುತಿನ ಕಲ್ಲುಗಳನ್ನು ಹಾಕಲಾಗಿದೆ.
ಈ ಮದ್ಯೆ ಗುರುತುಗಳು ಇಲ್ಲದ ಜಾಗದಲ್ಲಿ ಸೈನಿಕರು ಮುಖಾ ಮುಖಿ ಯಾದಾಗ 'ನೀವು ನಮ್ಮ ಜಾಗಕ್ಕೆ ಬಂದಿದ್ದೀರಿ' ಅಂತ ಭಾರತೀಯ ಸೈನಿಕರು 'ಇಲ್ಲ ನೀವೇ ನಮ್ಮಜಾಗಕ್ಕೆ ಬಂದಿದ್ದೀರಾ ' ಅಂತ ಚೀನಾ ಸೈನಿಕರು
ತಳ್ಳಾಟ ನೂಕಾಟ ಮತ್ತು ಕಲ್ಲಿನಲ್ಲಿ ಹೊಡೆದು ಕೊಳ್ಳೋದೆಲ್ಲ ಮಾಡುತ್ತಾರೆ.
ಆದರೆ ಗುಂಡಿನ ಮತ್ತು ಇತರೆ ಶಸ್ತ್ರ ಕಾಳಗ ನಡೆಯೋದಿಲ್ಲ.
****************all images are taken by google ******************