photo credit ;google
ಕಪ್ಪುವರ್ಣ ಜನರ ಮೇಲಿನ ಹಿಂಸಾಚಾರ ಈ ಪ್ರತಿಭಟನೆಗೆ ಕಾರಣವಾಗಿದೆ ಎರಡನೇ ಮಹಾಯುದ್ಧದ ಸ್ಮಾರಕಗಳನ್ನ ದ್ವಂಸ ಮಾಡಿದ್ದಾರೆ, ಐತಿಹಾಸಿಕ ಚರ್ಚ್ ವೊಂದಕ್ಕೆ ಬೆಂಕಿ ಇಟ್ಟಿದ್ದಾರೆ ಕ್ಯಾಲಿಫೋರ್ನಿಯಾದಲ್ಲಿ ಸೆಕ್ಯೂರಿಟಿ ಆಫೀಸರ್ ಒಬ್ಬರಿಗೆ ಗುಂಡು ಹಾರಿಸಿ ಕೊಲ್ಲಲಾಗಿದೆ ವಾಷಿಂಗ್ಟನ್ ನ ಶ್ವೇತಭವನದ ಮುಂದೆ ನಡೆದ ಪ್ರತಿಭಟನೆಗೆ ಸ್ವತಃ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಫ್ಟಿ ಬಂಕರ್ ನಲ್ಲಿ ಅಡಗಿ ಕುಳಿತಿದ್ದಾರೆ ಎಂದರೆ ನೀವೇ ಊಹಿಸಿ ಎಂತಹ ಪರಿಸ್ಥಿತಿ ಉಂಟಾಗಿರಬಹುದು?
ಅಮೆರಿಕ ದಲ್ಲಿ ಈ ತರಹದ ಪ್ರತಿಭಟನೆಗೆ ಕಾರಣ ಕಪ್ಪು ವರ್ಣೀಯನ ಹತ್ಯೆ ಆತನ ಹೆಸರು ಜೋರ್ಜ ಫಲೋಯ್, 46 ವರ್ಷದ ಈತ ಟೆಕ್ಸಾಸ್ ನಲ್ಲಿ ಬೌಂಸರ್ ಆಗಿ ಕೆಲಸ ನಿರ್ವಹಿಸುತಿದ್ದ ಆದರೆ ಚೀನಾ ಸೋಂಕಿನ ಕಾರಣ ಬಿಕ್ಕಟ್ಟು ಉಂಟಾಗಿ ಕೆಲಸ ಕಳೆದುಕೊಂಡು ಇತ್ತೀಚೆಗೆ ಮಿಣ್ಣೆಕಪೋಲೀಸ್ ನಗರಕ್ಕೆ ಬಂದಿದ್ದ ಆದರೆ ಮೇ 25 ನೇ ತಾರೀಕು ಅಲ್ಲಿನ ಪೊಲೀಸರಿಗೆ ಒಬ್ಬರು ಕರೆ ಮಾಡಿ 'ವ್ಯಕ್ತಿ ಒಬ್ಬ ನಕಲಿ ನೋಟಿನಿಂದ ಸಿಗರೇಟ್ ಖರೀದಿ ಮಾಡಿದ್ದಾಗಿ' ಮಾಹಿತಿ ನೀಡಿದ್ದ, ತಕ್ಷಣವೇ ತನಿಖೆಗೆ ಬಂದಿದ್ದ ಪೊಲೀಸರು ಜೋರ್ಜ ಫಲೋಯ್ ಅವರ ಕೈಗಳನ್ನು ಕಟ್ಟಿ ಅರೆಸ್ಟ್ ಮಾಡಿ ಪೊಲೀಸ್ ಜೇಪಿಗೆ ಹತ್ತುವಂತೆ ಸೂಚಿಸಿದ್ದಾರೆ ಅದಕ್ಕೆ ನಿರಾಕರಿಸಿದಕ್ಕೆ ಕಾರಿನ ಪಕ್ಕದಲ್ಲೇ ಮಲಗಿಸಿದ್ದ ಪೊಲೀಸ್ ತನ್ನ ಮೊಣಕಾಲಿಂದ ಆತನ ಕುತ್ತಿಗೆಯನ್ನ ನೆಲಕ್ಕೆ ಹೊತ್ತಿ
ಹಿಡಿದಿದ್ದಾನೆ, ಹುಸಿರಾಡಲಾಗದೆ ಜೋರ್ಜ ಫಲೋಯ್ ಎಂಬ ಕಪ್ಪು ವರ್ಣಿಯ 'ಐ ಕಾಂಟ್ ಬ್ರೀಥ್' 'ಪ್ಲೀಸ್' ಅಂದು 15-16 ಬಾರಿ ಗೋಗರೆದಿದ್ದಾನೆ ಆದರೂ ಬಿಡದ ಪೊಲೀಸ್ ಅಧಿಕಾರಿ ಹಾಗೆಯೇ ಮುಂದುವರಿಸಿದ್ದಾನೆ 5-6 ನಿಮಿಷದ ನಂತರ ಆ ಕಪ್ಪು ವ್ಯಕ್ತಿ ಅಲ್ಲೇ ಹುಸಿರುಗಟ್ಟಿ ಸಾವನ್ನಪ್ಪಿದ್ದಾನೆ ಆದರೂ ಆ ಬಿಳಿಯ ಪೊಲೀಸ್ ಅಧಿಕಾರಿ ತನ್ನ ಕಾಲನ್ನು ಕುತ್ತಿಗೆಯ ಮೇಲಿಂದ ತೆಗೆದೇ ಇರಲಿಲ್ಲ , ಆ ನಂತರ ಅಮೆರಿಕದಲ್ಲಿ ಕಪ್ಪು ವರ್ಣಿಯರು 'ಐ ಕಾಂಟ್ ಬ್ರೀಥ್' ಎಂಬ ಹೆಸರಿನ ಪ್ರತಿಭಟನೆ ಯ ಕೂಗು ಜೂರಾಗಿ ನಡೀತಾ ಇದೆ.
photo credit ;google
ಇಂತಹದೇ ಘಟನೆ 2014 ರಲ್ಲೂ ಕೂಡ ಕಪ್ಪು ವರ್ಣೀಯನ ಮೇಲೆ ಪೊಲೀಸರು ಕುತ್ತಿಗೆ ಲಾಕ್ ಮಾಡಿ ಹುಸಿರುಗಟ್ಟಿಸಿ ಪ್ರಾಣ ತೆಗೆದಿದ್ದರು ಆತನು ಸಹ 'ಐ ಕಾಂಟ್ ಬ್ರೀಥ್' ಅಂತಾನೆ ಕೂಗಿದರು ಬಿಡಲಿಲ್ಲ .ಮೃತರಿಬ್ಬರು ಅಮೆರಿಕನ್ನರೇ ಇಬ್ಬರು ಸಹ ಕಪ್ಪು ವರ್ಣಿಯರೆ ಮತ್ತು ಇಬ್ಬರೂ ಕೊನೆಯದಾಗಿ ಹೇಳಿದ್ದು 'ಐ ಕಾಂಟ್ ಬ್ರೀಥ್' ಬಹುಮುಖ್ಯವಾಗಿ ಇಬ್ಬರ ಪ್ರಾಣ ತೆಗೆದದ್ದು ಪೊಲೀಸರೆ ಕೊನೆಗೆ ಇಬ್ಬರ ಕೊಲೆಗೂ ಕಾರಣ ಅಸಮಾನತೆ!
ಅಮೆರಿಕಾದಲ್ಲಿ ಈಗ ನಡೆಯುತ್ತಿರುವ ಅಸಮಾನತೆಗೆ ಇತಿಹಾಸವೆ ಇದೆ, ಗುಲಾಮಗಿರಿ ಎಂಬ ಷೋಷಣೆಗೆ ಒಳಗಾದ ಆಫ್ರಿಕಾದ ಕಪ್ಪುವರ್ಣ ಜನರ ಕರಾಳ ಕಥೆ ಇದೆ, ಗುಲಾಮಗಿರಿ ಎಂಬ ಪದ್ದತಿ ಅಮೆರಿಕದಲ್ಲಿ ಅಂತ್ಯವಾಗಿ 400 ವರ್ಷ ಕಳೆದರೂ ಇನ್ನೂ ಅಮೆರಿಕದಲ್ಲಿ ಬಿಳಿಯರ ಮನಸಿನಲ್ಲಿ ಕಪ್ಪುವರ್ಣದವರ ಬಗೆಗಿನ ಆಸಮಾನತೆ ಇನ್ನೂ ಮುಂದುವರೆದಿದೆ, ಅಮೆರಿಕಾದ ಬಿಳಿಯರಲ್ಲಿರುವ ಶ್ರೇಷ್ಟತೆಯ ಕೊಳಕು ರೋಗ ಈ ಅಸಮಾನತೆಗೆ ಕಾರಣವಾಗಿದೆ,
400 ವರ್ಷಗಳ ಹಿಂದೆ ಅಮೇರಿಕಾಗೆ ಆಫ್ರಿಕಾದಿಂದ ಇವರನ್ನ ಜೀತದಾಳನ್ನಾಗಿ ಮತ್ತು ಅವರ ಜಮೀನಿನಲ್ಲಿ ಕೆಲಸ ಮಾಡಲು ಸ್ವಂತ ಕೆಲಸಕ್ಕೆ ಬಳಸಿಕೊಳ್ಳಲು ಒಂದು ಸಮುದ್ರಕಳ್ಳರಿಂದ ತೆಗೆದುಕೊಂಡರು, ಈ ಕಪ್ಪು ವರ್ಣದವರು ಇರುವುದು ಬಿಳಿಯರ ಕೆಲಸ ಮಾಡಲೆಂದೇ ತಿಳಿದಿದ್ದರು ನಂತರ ಅಮೆರಿಕದಲ್ಲಿ ಕಪ್ಪು ವರ್ಣದ ತಾಯಿಯ ಹೊಟ್ಟೆಯಲ್ಲಿ ಜನಿಸಿದ ಮಗು ಕೂಡ ಜೀತದಾಳಾಗಿಯೇ ಇರಬೇಕಾಗಿತ್ತು,
photo credit ;google
ಅಮೆರಿಕಾದಲ್ಲಿ ಸ್ವಾತಂತ್ರ್ಯ ಬಂದರೂ ಅಲ್ಲಿನ ಸಂವಿಧಾನದಲ್ಲಿ 'ದೇವರು ಸೃಷ್ಟಿಸಿದ ಎಲ್ಲಾ ಮಾನವರು ಸ್ವಾತಂತ್ರರೇ' ಎಂದು ಬರೆದಾಗಲೂ ಅವರನ್ನು ಕಪ್ಪು ಜನರನ್ನು ಮನುಷ್ಯರನ್ನಾಗಿ ಪರಿಗಣಿಸಲೇ ಇಲ್ಲ, ಹಲವಾರು ವರ್ಷಗಳ ಬಳಿಕ ಅಂದರೆ 1865ರಲ್ಲಿ ಕಪ್ಪು ವರ್ಣಜನತೆಗೂ ಕೂಡ ಮತ ಚಲಾಯಿಸುವ ಹಕ್ಕನ್ನು ಕೊಡಲಾಯಿತು.
ಇಷ್ಟೂ ಮುಂದುವರೆದ ದೇಶದಲ್ಲೂ ಎಲ್ಲಾ ವಿಚಾರಗಳಲ್ಲೂ ಮೂಗು ತೂರಿಸುವ ಈ ತರಹದ ಬೇದ ಈಗಲೂ ಇದೆ,
ಒಂದು ಒಳ್ಳೆಯ ಸಂಗತಿ ಏನೆಂದರೆ ಅಲ್ಲಿನ ಬಿಳಿಯ ಜನರು ಸಹ ಈ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.
ನಂತರ ಅಮೆರಿಕದ ಅಧ್ಯಕ್ಷರು ಹೂರಟದ ತೀವ್ರತೆಯನ್ನು ನಿಯಂತ್ರಣಗೊಳಿಸಲು ಸೇನೆಯನ್ನು ನಿಯೋಜಿಸಲು ಹೇಳಿದ್ದಾಗ ಅಲ್ಲಿನ ಪೊಲೀಸ್ ಅಧಿಕಾರಿಯೊಬ್ಬ ನೀವು ಬಾಯಿಮುಚ್ಚಿ ಎಂದುಬಿಟ್ಟ, ಕಾರಣ ಈ ಕೃತ್ಯವನ್ನು ಎಸಗಿದವರು ಪೊಲೀಸರೆ ಆಗಿದ್ದರಿಂದ ಜನರು ಪೊಲೀಸರ ಮೇಲೆ ತಿರುಗಿಬಿದ್ದು ಪೊಲೀಸರು ಎಷ್ಟೇ ಅರೆಸ್ಟ್ ಮಾಡಿ ಜೈಲಿಗೆ ಹಾಕಿದ್ದರು ಹೆದರುತ್ತಿರಲಿಲ್ಲ
ಇದನ್ನು ತಿಳಿದ ಪೊಲೀಸರು ಇದು ಶಾಂತಿಯಿಂದ ಬಗೆಹರಿಯಬೇಕಾದ ವಿಷಯ ಇದನ್ನು ಶಾಂತಿಯಿಂದಲೇ ಸುಧಾರಿಸಬೇಕು ಅಧ್ಯಕ್ಷರಿಗೆ ನೀವು ಬಾಯಿಮುಚ್ಚಿ ಎಂದಿರಬಹುದು.