ದೇಶಗಳಿಗೂ ರೋಗ ಹರಡಿದ ಚೀನಾ ಮಾತ್ರ ತನ್ನ ಮೇಲಿನ ಆರೋಪದ ದಿಕ್ಕನ್ನು ಬೇರೆಕಡೆ ತಿರುಗಿಸಲು ಭಾರತದ ವಿರುದ್ದ ಕಾಲು ಕೆರೆದು ಜಗಳ ಮಾಡುತ್ತಿದೆ.
ತನ್ನ ಗುಳ್ಳೆನರಿಯ ಬುದ್ದಿ ಒಮ್ಮೆ ಗಮನಿಸಿ ಒಮ್ಮೆ ಅರುಣಾಚಲ ಪ್ರದೇಶದ ಬಳಿ ಯೋಧರ ಬಳಿ ಗಲಾಟೆ ಮಾಡಿ ಭಾರತದ ದಿಕ್ಕನ್ನು ಅರುಣಾಚಲದ ಗಡಿಯ ಕಡೆ ತಿರುಗಿಸಿ ಮತ್ತೆ ಕಾಶ್ಮೀರದ ಆಕ್ಸ್ಇಚಿನ್ ಬಳಿ ಮತ್ತೆ ಗಲಾಟೆ ಶುರುಮಾಡಿ ಪ್ರದೇಶವನ್ನು ಆಕ್ರಮಿಸಲು ಮುಂದಾಗುತ್ತದೆ ಮತ್ತೆ ಭಾರತದ ದಿಕ್ಕನ್ನು ಕಾಶ್ಮೀರದ ಕಡೆ ತಿರುಗಿಸಿ ಅರುಣಾಚಲದ ಕಡೆ ತಿರುಗಿಸುತ್ತದೆ ಆದರೂ ಚೀನಾದ ಗುಳ್ಳೆನರಿ ಬುದ್ದಿ ಅರಿತ ಭಾರತದ ಯೋಧರು ಚೀನೀಯರನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದರು, ಅಷ್ಟಕ್ಕೂ ಚೀನಾ ಮತ್ತು ಭಾರತದ ಯೋಧರ ನಡುವೆ ಜಗಳವಾಗಲು ಕಾರಣವನ್ನು ಈ ಹಿಂದೆ ಬರೆದ ಆರ್ಟಿಕಲ್ ನ ಲಿಂಕ್ ಒಮ್ಮೆ ಓದಿಕೊಂಡು
ಬನ್ನಿ ಆಗ ನಿಮಗೆ ನಿಜವಾದ ಕಾರಣ ಸರಿಯಾಗಿ ಅರ್ಥವಾಗತ್ತೆ.
ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾದರೂ ನಮ್ಮ ನರೇಂದ್ರ ಮೋದಿಯಿಂದ ಸುಮ್ಮನಿರಲು ಸಾಧ್ಯವೇ ಇಲ್ಲ ಮತ್ತೊಮ್ಮೆ ಏರ್ ಸ್ಟ್ರೈಕ್ ಅಥವಾ ಸರ್ಗಿಕಲ್ ಸ್ಟ್ರೈಕ್ ಮಾಡಲು ಅದು ಪಾಕಿಸ್ತಾನವಲ್ಲ ಅದು ಚೀನಾ ನಮಗಿಂತ ಹೆಚ್ಚು ಬಲಶಾಲಿ ಮತ್ತು ಹೆಚ್ಚು ಯುದ್ಧ ಉಪಕರಣ ಸೇನೆ ಹೊಂದಿದ ದೇಶ ಒಂದು ವೇಳೆ ಯುದ್ಧ ನಡೆದರೆ ಹಾನಿ ಎರಡೂ ದೇಶಕ್ಕು ಹೆಚ್ಚೇ ಆಗುತ್ತದೆ ಎರಡೂ ದೇಶದಲ್ಲೂ ಅಣುಶಕ್ತಿ ಇರುವ ಕಾರಣ ಯುದ್ಧ ಎನ್ನುವುದು ಕರೋನಾ ಸಮಯದಲ್ಲಿ ಗಾಯದ ಮೇಲೆ ಬರೆ ಎಳೆದಂತೆ, ಅದಕ್ಕಾಗಿ ಈ ಸಮಯದಲ್ಲಿ ಶಕ್ತಿ ತೋರಿಸುವುದಕ್ಕಿಂತ ಯುಕ್ತಿಯಿಂದ ಗೆಲ್ಲಬೇಕು ಮತ್ತು ಇಲ್ಲಿ ಹಾವು ಸಾಯಬಾರದು ದೊಣ್ಣೆ ಮುರಿಯಬಾರದು ಆದರೆ ಹಾವಿಗೆ ಪೆಟ್ಟಾಗಬೇಕು ಮೋದಿ ಮಾಡಿದ್ದು ಇದನ್ನೇ ಚೀನವನ್ನು ಹೊಡೆಯಲಿಲ್ಲ ಆದರೂ ಚೀನಾದ ಸೊಂಟವನ್ನು ಮುರಿದರು.
credit:google
ಇಷ್ಟಕ್ಕೂ ಮೋದಿ ರಚಿಸಿದ ವ್ಯೂಹ ಯಾವುದು? ಭಾರತ-ಆಸ್ಪ್ರೇಲಿಯಾ ನಡುವೆ ಗುರುವಾರ ಐತಿಹಾಸಿಕ ಸೇನಾ ಒಪ್ಪಂದ ಮತ್ತು ಶತ್ರುವಿನ ಶತ್ರು ಮಿತ್ರ ಎಂಬಂತೆ ಭಾರತದ ಬೆನ್ನಿಗೆ ನಿಂತ ಅಮೇರಿಕಾ ಈ ಎರಡೂ ಕಡೆಯ ವ್ಯೂಹದಿಂದ ಚೀನಾ ಈಗ ತೆಪ್ಪಗಾಗಿದೆ, ಅಮೇರಿಕಾ ಮತ್ತು ಚೀನಾದ ನಡುವೆ ಇರುವ ವೈರತ್ವ ಎಲ್ಲರಿಗು ಗೊತ್ತೇ ಇದೆ ಡೊನಾಲ್ಡ್ ಟ್ರಂಪ್ ತನ್ನ ದಿನ ಶುರು ಮಾಡುವುದೇ ಚೀನಗೆ ಕಿಡಿಕಾರುವ ಮುಖಾಂತರ.
ಇನ್ನೂ ಭಾರತ ಮತ್ತು ಆಸ್ಟ್ರೇಲಿಯಾದ ಒಪ್ಪಂದ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಕೊರೋನಾ ವೈರಸ್ ಕಾರಣ ನೇರವಾಗಿ ಭೇಟಿ ಮಾಡದೇ ಆನ್‌ಲೈನ್‌ನಲ್ಲೇ ಗುರುವಾರ ಶೃಂಗಸಭೆ ನಡೆಸಿದರು. ಭಾರತದ ನಾಯಕರೊಬ್ಬರು ವಿಡಿಯೋ ಶೃಂಗ ನಡೆಸಿದ್ದು ಇದೇ ಮೊದಲು. ಈ ವೇಳೆ ಸೇನಾ ಒಪ್ಪಂದ ಮಾಡಿಕೊಳ್ಳುವ ಒಮ್ಮತಕ್ಕೆ ಬರಲಾಯಿತು. ಸೇನಾ ಸಹಕಾರ ಒಪ್ಪಂದದ ಪ್ರಕಾರ, ಭಾರತ ಹಾಗೂ ಆಸ್ಪ್ರೇಲಿಯಾ ಪರಸ್ಪರರ ಸೇನಾ ನೆಲೆಗಳನ್ನು ರಿಪೇರಿ, ಸಲಕರಣೆಗಳ ಪೂರೈಕೆ- ಇತ್ಯಾದಿ ಕೆಲಸಗಳಿಗೆ ಬಳಸಿಕೊಳ್ಳಲಿವೆ. ಈ ಒಪ್ಪಂದ ನಡೆಯುತ್ತಿದ್ದಂತೆ ಚೀನಗೆ ಹೆದರಿಕೆ ಶುರುವಾಗಿ ತಾನಾಗಿಯೇ ಶಾಂತಿ ಮಾತುಕತೆಗೆ ಮುಂದಾಗಿದೆ.
ಇಂತಹ ಭಾರತದ ರಾಜತಾಂತ್ರಿಕ ನಡೆ ಇತಿಹಾಸದಲ್ಲಿ ಮಕ್ಕಳಿಗೆ ನೀತಿಕಥೆ ಯಾಗುವುತ್ತವೆ "ಶಕ್ತಿಯಿಂದ ಗೆಲ್ಲಲಾಗದ್ದು ಯುಕ್ತಿಯಿಂದ ಗೆಲ್ಲಬೇಕು".