ಕೆಲವು ದಿನಗಳ ಹಿಂದೆ ಎಲ್ಲಾ  ಟ್ರೋಲ್ ಪೇಜ್ ಗಳಲ್ಲಿ ದುರಂತ ಅಂತ್ಯ ಕಾಣುವ ದೃಶ್ಯಗಳಿಗೆ ಶವ ಹೊತ್ತು ನೃತ್ಯ ಮಾಡುವ  ಕಾಫಿನ್ ವೀಡಿಯೋ ಗಳನ್ನು ಸೇರಿಸಿ ಟ್ರೋಲ್ ಮಾಡಿರುವ ವೀಡಿಯೋವನ್ನು ನೀವು ಎಲ್ಲಾ ಸಾಮಾಜಿಕತಾಣ ಗಳಲ್ಲಿ  ನೋಡಿಯೇ ಇರುತ್ತೀರ, ಅಂದಹಾಗೆ ಈ ವಿಡಿಯೋವಿನ ಮೂಲ ಯಾವುದು ಎಂಬ ಪ್ರಶ್ನೆಒಮ್ಮೆಯಾದರೂ ಬಂದಿರಲೇ ಬೇಕು. 
video credit: youtube 


ಈ ವೀಡಿಯೋ ನ ಮೂಲ ಬಂದು ಆಫ್ರಿಕಾ ಖಂಡದ  ಘಾನಾ ಎಂಬ ದೇಶಕ್ಕೆ  ಸೇರಿದ್ದಾಗಿದೆ,  ಅಲ್ಲಿನ ಒಂದು ಸಮುದಾಯಕ್ಕೆ ಸೇರಿರುವ ಜನರು ಸಾವನ್ನು ಸಂಭ್ರಮದಿಂದ ಆಚರಿಸುತ್ತಾರೆ, 
      ನಮ್ಮಲ್ಲಿ ಯಾರಾದರೂ ಸಾವನ್ನಪ್ಪಿದರೆ ನಮ್ಮ ಜನ ಕಣ್ಣೀರಿಟ್ಟು  ಮೌನಾಚಾರಣೆ ಮಾಡಿದರೆ ಅದೇನಪ್ಪ ಆಜನ ಸಂಭ್ರಮ ಮಾಡಲು  ಹೇಗೆ ತಾನೇ ಸಾಧ್ಯ ? ಸಾವಲ್ಲು ಸಂಭ್ರಮವಾ? ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಿರಲೇ ಬೇಕು ?
      ಹೌದು ಅಲ್ಲಿನ ಜನ ಹಾಗೆ ಸಾವನ್ನು ಸಾಂಬ್ರಮಾಚಾರಣೆ ಮಾಡಲು ಕಾರಣ ಅಲ್ಲಿನ ಸತ್ತವರು ಮುಂದಿನ ಅಥವಾ  ಮರುಜನ್ಮಯಕ್ಕೆ ಹೂಗುತ್ತಿರುತ್ತಾರೆ ಹಾಗೆ ಹೋಗುವುವವರನ್ನು ಖುಷಿಯಾಗಿ ಸಂಭ್ರಮದಿಂದ  ಕಳುಹಿಸಿ ಕೊಡಬೇಕೆಂದು ಅವರು ಸತ್ತವರ ಶವವನ್ನು ಹೊತ್ತು ನೃತ್ಯ ಮಾಡುತ್ತಾರೆ. 
****ಕರ್ನಾಟಕ ಪೊಲೀಸ್ ರ ಕಾಫಿನ್ ಡಾನ್ಸ್ **** youtube tmk

       ಈ ವಿಡಿಯೋ ಟ್ರೆಂಡಿಂಗ್ ಆಗಲು ಕಾರಣ 2015ರಲ್ಲಿ ಟ್ರಾವೆಲಿನ್ ಸಿಸ್ಟರ್ ಎಂಬ ಯೂಟ್ಯೂಬರ್ ಘಾನಾದಲ್ಲಿನ ತನ್ನ ಅತ್ತೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದಳು. ಅಲ್ಲಿ ಆಕೆ ಈ ಅಚ್ಚರಿದಾಯಕ ನೃತ್ಯ ಪ್ರದರ್ಶನವನ್ನು ಸೆರೆಹಿಡಿದು ತನ್ನ ಯೂಟ್ಯೂಬ್ ಚಾನೆಲ್ ಅಲ್ಲಿ ಅಪ್ಲೋಡ್ ಮಾಡಿದ್ದಳು. 
     ಅದನ್ನು ಕಂಡ ಟ್ರೋಲಿಗರು ಇದನ್ನು ತಮ್ಮ ಟ್ಯಾಲೆಂಟ್  ಉಪಯೋಗಿಸಿ ಈ ತರಹ ಹಾಸ್ಯಭರಿತ ವೀಡಿಯೋ ಗಳನ್ನು ಮಾಡಿ  ತಮ್ಮ ಪೇಜ್ ಗೆ ಬಿಡುತ್ತಾರೆ 
ಏನೇ ಆಗಲಿ ಈ ಸ್ವಾರ್ಥ ಜನರ ನಡುವೆಯೂ ಎಲ್ಲರನ್ನೂ ನಗಿಸುವ ಟ್ರೋಲ್ ಪೇಜ್ ಗಳ ಅಡ್ಮಿನ್ ಗಳಿಗೆ ಮತ್ತು ಅವರ ಕ್ರಿಯಾಶೀಲತೆಗೆ ನಮ್ಮದೊಂದು ಸಲಾಂ    
*********************************************************************************************
ಇಂತಹ ಆಸಕ್ತಿದಾಯಕ ವಿಷಯಗಳನ್ನು ಪಡೆಯಲು ನೀವು ನಮ್ಮ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಪೇಜ್ ಗೆ ಫೋಲ್ಲೋ  ಮಾಡಿ