ದಯವಿಟ್ಟು ಉದ್ಯೋಗಾಕಾಂಕ್ಷಿಗಳೇ ಇಂತಹವರಿಂದ ಎಚ್ಚರದಿಂದಿರಿ.
ಹಣ ವಂಚನೆ ಮಾಡುತ್ತಿರುವುದು ಹೇಗೆ?
ಫೇಸ್ಬುಕ್ ಮತ್ತು ವಾಟ್ಸಪ್ ಗ್ರೂಪ್ ಗಳ ಮುಖಾಂತರ ಪ್ರತಿಷ್ಠಿತ ಕಂಪನಿಯ ಹೆಸರನ್ನು ಹೇಳಿಕೊಂಡು ನಾವು ನಿಮಗೆ ಕೆಲಸ ಕೊಡಿಸುವುದಾಗಿ ಹೇಳಿ ಬೆಂಗಳೂರು ಅಥವಾ ದೊಡ್ಡ ದೊಡ್ಡ ನಗರಗಳಿಗೆ ಕರೆಸಿಕೊಂಡು ಅಮಾಯಕರು ತಂದಿದ್ದ ಹಣವನ್ನು ವಸೂಲಿಮಾಡುತ್ತಾರೆ.
ಬೆಂಗಳೂರಲ್ಲದ ಜನರೇ ಇವರಿಗೆ ಟಾರ್ಗೆಟ್!
ಇವರು ಬೆಂಗಳೂರಲ್ಲದ ಅಥವಾ ಬೇರೆ ಜಿಲ್ಲೆಯ ಭಾಗದ ಜನರನ್ನು ಟಾರ್ಗೆಟ್ ಮಾಡಿ ಫೋನ್ ಕರೆಯ ಮುಖಾಂತರ ಕರೆಸಿ ಇವರ ಹಣವನ್ನು ಲೂಟಿ ಮಾಡುತ್ತಾರೆ. ಹೇಗೆ ನಂಬಿಸುತ್ತಾರೆ ಅನ್ನುವುದಕ್ಕೆ ಪ್ರತ್ಯಕ್ಷ ವೀಡಿಯೋ ಒಂದು ನೋಡಿ.
ಜನರನ್ನು ನಂಬಿಸಲು ಹುಡುಗಿಯರ ಮುಖಾಂತರ ಕರೆಸಂಪರ್ಕ ಮಾಡಿಸಲಾಗುತ್ತದೆ.
ಹೌದು ಇಲ್ಲಿ ಕರೆ ಸ್ವೀಕರಿಸುವುದಕ್ಕೆ ಮತ್ತು ಕರೆ ಮಾಡಲು ಹುಡುಗಿಯರನ್ನು ಬಳಸುತ್ತಾರೆ ಜನರನ್ನು ಬೇಗ ನಂಬಿಸಲು ಹುಡುಗಿಯರಿಗೆ ಹೇಗೆ ಮಾತನಾಡಬೇಕೆಂಬುದನ್ನು ಟ್ರೈನಿಂಗ್ ಕೊಟ್ಟಿರುತ್ತಾರೆ.
ಹಾಗಾದರೆ ಇಂತಹವರನ್ನು ಕಂಡುಹಿಡಿಯುವುದು ಹೇಗೆ?
ಫೇಸ್ಬುಕ್ ಹಾಗೂ ವಾಟ್ಸಪ್ ನ ಗ್ರೂಪ್ ನಲ್ಲಿ ನಿಜವಾದ ಪೋಸ್ಟ್ ಅಥವಾ ವಂಚಕರ ಪೋಸ್ಟ್ ಬಂದರೂ ಗೊತ್ತಾಗುವುದಿಲ್ಲ ಹಾಗಾಗಿ ಇಂತವರನ್ನು ಪತ್ತೆ ಹಚ್ಚಲು ಮೊದಲನೆಯದಾಗಿ truecaller ನಲ್ಲಿ ಚೆಕ್ ಮಾಡಿ ಕೆಲವರು ಸ್ಪ್ಯಾಮ್ ಅಂತ ರಿಪೋರ್ಟ್ ಮಾಡಿರುತ್ತಾರೆ.
ಮತ್ತು ಯಾವುದೇ ಪ್ರತಿಷ್ಠಿತ ಕಂಪನಿಯೂ ನಿಮ್ಮ ಹತ್ತಿರ ಹಣ ಕೇಳುವುದಿಲ್ಲ
ಅಕ್ಕಾಸ್ಮತ್ ಅವರು ಹಣ ಕೇಳಿದ್ದೆ ಆಗಿದ್ದಲ್ಲಿ ಅವರು ವಂಚಕರೆ ಆಗಿರುತ್ತಾರೆ.